ಮಡಿಕೇರಿ, ಜು. 2: ಕೊಡಗು ಜಿಲ್ಲೆಯಿಂದ ಕೇರಳದ ವಯನಾಡು ಮತ್ತು ಕಣ್ಣೂರು ಜಿಲ್ಲೆಗಳಿಗೆ ಪ್ರಯಾಣಿಸಿದ್ದ ವ್ಯಕ್ತಿಗಳಿಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ವಯನಾಡು ಮತ್ತು ಕಣ್ಣೂರು ಜಿಲ್ಲಾಡಳಿತ ಮಾಹಿತಿ ನೀಡಿದೆ.ಜಿಲ್ಲೆಯ ವೀರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯ ಈಸ್ಟ್ ನೆಮ್ಮಲೆ ಗ್ರಾಮದ ಕಾಫಿ ತೋಟವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ 40 ವರ್ಷದ ಮಹಿಳೆಯೊಬ್ಬರು ಜೂ. 23 ರಂದು ಬಸ್‍ನಲ್ಲಿ ಕೇರಳ ರಾಜ್ಯದ ತೋಲ್ಪಟ್ಟಿಯ ತಿರುನಲ್ವೇಲಿ ಪಂಚಾಯತ್‍ನ ಅರುಣಪಾರ ಕಾಲೋನಿಗೆ ಕೊಡಗಿನಿಂದ ಗೋಣಿಕೊಪ್ಪ-ಹುಣಸೂರು-ಮೈಸೂರು-ಹೆಚ್.ಡಿ. ಕೋಟೆ-ಬಾವಲಿ ಮಾರ್ಗವಾಗಿ ತೆರಳಿರುತ್ತಾರೆ. ಇವರಿಗೆ ಜೂ. 24 ರಂದು ಕೇರಳದ ಮುತ್ತಂಗದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜೂ. 29 ರಂದು ಬಂದ ವರದಿಯಲ್ಲಿ ಕೋವಿಡ್ ಮಡಿಕೇರಿ, ಜು. 2: ಕೊಡಗು ಜಿಲ್ಲೆಯಿಂದ ಕೇರಳದ ವಯನಾಡು ಮತ್ತು ಕಣ್ಣೂರು ಜಿಲ್ಲೆಗಳಿಗೆ ಪ್ರಯಾಣಿಸಿದ್ದ ವ್ಯಕ್ತಿಗಳಿಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ವಯನಾಡು ಮತ್ತು ಕಣ್ಣೂರು ಜಿಲ್ಲಾಡಳಿತ ಮಾಹಿತಿ ನೀಡಿದೆ.ಜಿಲ್ಲೆಯ ವೀರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯ ಈಸ್ಟ್ ನೆಮ್ಮಲೆ ಗ್ರಾಮದ ಕಾಫಿ ತೋಟವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ 40 ವರ್ಷದ ಮಹಿಳೆಯೊಬ್ಬರು ಜೂ. 23 ರಂದು ಬಸ್‍ನಲ್ಲಿ ಕೇರಳ ರಾಜ್ಯದ ತೋಲ್ಪಟ್ಟಿಯ ತಿರುನಲ್ವೇಲಿ ಪಂಚಾಯತ್‍ನ ಅರುಣಪಾರ ಕಾಲೋನಿಗೆ ಕೊಡಗಿನಿಂದ ಗೋಣಿಕೊಪ್ಪ-ಹುಣಸೂರು-ಮೈಸೂರು-ಹೆಚ್.ಡಿ. ಕೋಟೆ-ಬಾವಲಿ ಮಾರ್ಗವಾಗಿ ತೆರಳಿರುತ್ತಾರೆ.

ಇವರಿಗೆ ಜೂ. 24 ರಂದು ಕೇರಳದ ಮುತ್ತಂಗದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜೂ. 29 ರಂದು ಬಂದ ವರದಿಯಲ್ಲಿ ಕೋವಿಡ್ ಕಾರಣ ಮಗುವನ್ನು ಕೇರಳದ ಕಣ್ಣೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಗುವಿನ ತಂದೆ ಮತ್ತು ತಾಯಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ.

ಮಗು ನೆಲೆಸಿದ್ದ ವೀರಾಜಪೇಟೆಯ ರಾಮನಗರದಲ್ಲಿರುವ ಮಗುವಿನ ತಾತನ ಮನೆಯ ಸದಸ್ಯರು ಪ್ರಾಥಮಿಕ ಸಂಪರ್ಕವಾಗಿದ್ದು, ಇವರ ಗಂಟಲು/ಮೂಗಿನ ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಕ್ರಮ ವಹಿಸಲಾಗುತ್ತಿದೆ.

ಈ ಮೇಲಿನ ಎರಡೂ ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳ ಗಂಟಲು/ಮೂಗಿನ ದ್ರವ ಮಾದರಿ ಪರೀಕ್ಷೆಗೆ ಕ್ರಮ ವಹಿಸಲಾಗಿದೆ ಮತ್ತು ಅವರನ್ನು ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿರಲು ಸೂಚಿಸಲಾಗಿದೆ. ಆದ್ದರಿಂದ ಜಿಲ್ಲೆಯ ಸ್ಥಳೀಯ ಜನತೆ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.