ಮಡಿಕೇರಿ, ಜು. 2: ಭಾರತೀಯ ಭೂಸೇನೆಯ 16 ಲೈಟ್ ಕ್ಯಾವಲರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಡಿಕೇರಿಯ ಯೋಧ ಮಲಚೀರ ನಾಣಯ್ಯ (ನವೀನ್) ಅವರು ಇದೀಗ ಈ ಹುದ್ದೆಯಿಂದ ರಿಷಲ್‍ದಾರ್ ಮೇಜರ್ ಆಗಿ ಬಡ್ತಿ ಹೊಂದಿದ್ದಾರೆ. ಇವರು ಮಡಿಕೇರಿಯ ನಿವಾಸಿ ನಿವೃತ್ತ ಯೋಧ ಜೈಜವಾನ್ ಸ್ಟೋರ್ಸ್ ಮಾಲೀಕರಾದ ಮಲಚೀರ ಅಚ್ಚಯ್ಯ ಹಾಗೂ ಪಾರ್ವತಿ ದಂಪತಿಯ ಪುತ್ರ.