ಕೂಡಿಗೆ, ಜು. 1: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಮುಂಭಾಗದಲ್ಲಿರುವ ಹಾಸನ ಕುಶಾಲನಗರ ಹೆದ್ದಾರಿಯ ಸಮೀಪದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಟ್ಯಾಂಕ್ ಅನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ಟ್ಯಾಂಕ್ ಸುತ್ತ ಗಿಡಗಂಟಿಗಳು ಬೆಳೆದಿದ್ದು, ಅಶುಚಿತ್ವದಿಂದ ಕೂಡಿದೆ. ಈ ಟ್ಯಾಂಕ್‍ನಿಂದ ಸಾರ್ವಜನಿಕರಿಗೆ ಮತ್ತು ಅದರ ಮೂಲಕ ಸಮೀಪದಲ್ಲಿರುವ ಪ್ರಾಥಮಿಕ ಶಾಲೆಗೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ನೀರನ್ನು ಕುಡಿಯಲು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ಪಕ್ಕದಲ್ಲಿ ಅಂಗಡಿ ಮಳಿಗೆಯವರು ಮತ್ತು ಮನೆಯವರು ಕುಡಿಯುವ ನೀರನ್ನು ಬಳಸಬೇಕಾಗಿದೆ. ಸಂಬಂಧಿಸಿದ ಗ್ರಾಮ ಪಂಚಾಯಿತಿಯವರು ಕಾಡು ಕಡಿದು ಟ್ಯಾಂಕ್ ಅನ್ನು ಶುಚಿತ್ವಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.