ಮಡಿಕೇರಿ, ಜು. 1: ಕೇಂದ್ರ ಸರ್ಕಾರವು 2018-19ನೇ ಸಾಲಿನ ಬಜೆಟ್‍ನಲ್ಲಿ ಕಿಸಾನ್ ಕ್ರೇಡಿಟ್ ಕಾರ್ಡ್ (ಏಅಅ) ಸೌಲಭ್ಯವನ್ನು ಮೀನುಗಾರಿಕೆ ಚಟುವಟಿಕೆ ಹಾಗೂ ಮೀನು ಕೃಷಿಕರಿಗೆ ವಿಸ್ತರಣೆ ಮಾಡಿ ಘೋಷಿಸಿದೆ. ಈ ಯೋಜನೆಯಡಿ ಮೀನು ಕೃಷಿಕರು, ಅಲ್ಪಾವದಿ ಸಾಲವನ್ನು ಬ್ಯಾಂಕ್‍ಗಳ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಪಡೆಯಬಹುದಾಗಿದೆ, ಈಗಾಗಲೇ ಕಿಸಾನ್ ಕ್ರೆಡಿಟ್ ಕಾರ್ಡ್ (ಏಅಅ) ಪಡೆದುಕೊಂಡಿರುವ ರೈತರು ಮೀನುಗಾರಿಕೆ ಚಟುವಟಿಕೆಗಳಿಗೂ ಬ್ಯಾಂಕ್‍ಗಳಿಂದ ಅಲ್ಪಾವಧಿ ಸಾಲವನ್ನು ಪಡೆದು ಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ಸಾಲದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಲು ಮಡಿಕೇರಿ ತಾಲೂಕಿನ ಮೀನುಗಾರಿಕೆ ಸಹಾಯಕ ನಿದೇಶಕರು ಶ್ರೇಣಿ-2, ಮಡಿಕೇರಿ ಮೊಬೈಲ್ ಸಂಖ್ಯೆ 9886717626, ವೀರಾಜಪೇಟೆ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-2, ಪೊನ್ನಂಪೇಟೆ ಮೊಬೈಲ್ ಸಂಖ್ಯೆ 8105262902, ಸೋಮವಾರಪೇಟೆ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-2, ಸೋಮವಾರಪೇಟೆ ಮೊಬೈಲ್ ಸಂಖ್ಯೆ 8073649362 ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್ ತಿಳಿಸಿದ್ದಾರೆ.