ಮಡಿಕೇರಿ, ಜೂ. 28: ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇತರ ದೇಶ/ ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ.

ಇತರ ದೇಶ/ ರಾಜ್ಯ/ ಜಿಲ್ಲೆಗಳಿಂದ ಕಳೆದ 14 ದಿನಗಳಲ್ಲಿ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರ ಪೈಕಿ ಸಂಪರ್ಕ ತಡೆಯಲ್ಲಿರುವ ಜನರ ವಿವರ ಕೆಳಕಂಡಂತಿದೆ.

ಇತರ ದೇಶದ ಜನರು- 17

ಇತರ ರಾಜ್ಯದ ಜನರು-614

ಒಟ್ಟು ಜನರು-631

ಇಲ್ಲಿಯವರೆಗೆ ಒಟ್ಟು 8425 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.

ಪಾಸಿಟಿವ್ ಪ್ರಕರಣಗಳು- 43 (ಮೂವರು ಗುಣಮುಖರಾಗಿದ್ದಾರೆ)

ನೆಗೆಟಿವ್ ವರದಿ ಬಂದ ಪ್ರಕರಣಗಳು-6923

ವರದಿ ನಿರೀಕ್ಷಿತ ಪ್ರಕರಣಗಳು-1459

ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ 160 ಜನರು ದಾಖಲಿರುತ್ತಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.