ಮಡಿಕೇರಿ, ಜೂ. 25: ಕೊಡವ ನ್ಯಾಷನಲ್ ಕೌನ್ಸಿಲ್ ಅದರ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಸ್ವಯಂಸೇವಕರಾದ ಅಲಮಂಡಾ ಜೈ, ಪಟ್ಟಮಾಡ ಕುಶಾ ಮತ್ತು ಪಟ್ಟಮಾಡ ಅಶೋಕ್ ಅವರು ನ್ಯಾಯಮೂರ್ತಿ ಹೆಚ್.ಎನ್. ನಾಗ ಮೋಹನದಾಸ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದರು.
ನಾಚಪ್ಪ ಅವರು ನಮ್ಮ ಸಂವಿಧಾನದ ಎಸ್ಟಿ ಪಟ್ಟಿಯಲ್ಲಿ ಕೊಡವ ಬುಡಕಟ್ಟು ಜನಾಂಗವನ್ನು ಸೇರಿಸುವ ಅಗತ್ಯವನ್ನು ವಿವರಿಸುವ ಒಂದು ನಿಖರವಾದ ಮತ್ತು ವಿವರವಾದ ಜ್ಞಾಪನಾ ಪತ್ರವನ್ನು ಸಲ್ಲಿಸಿದರು. ಬುಡಕಟ್ಟು ಜನಾಂಗದವರ ಬಗ್ಗೆ ಮೌಲ್ಯಮಾಪನ ಮಾಡಿದ ಮತ್ತು ಸ್ಥಳೀಯ ಬುಡಕಟ್ಟು ಗುಣಲಕ್ಷಣದ ಬಗ್ಗೆ ವಿವರಿಸಿದರು. ಶಾಸನಬದ್ಧತೆಯ ಅಗತ್ಯತೆ ಮತ್ತು ಅವಶ್ಯಕತೆಯ ಬಗ್ಗೆ ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟರು. ಕೊಡವ ಬುಡಕಟ್ಟು, ಅವರ ಭಾಷೆ, ಸಂಸ್ಕøತಿ-ಜಾನಪದ ಗುರುತು, ಅವರ ಹಳೆಯ ಅನುವಂಶಿಕ ಹೆಸರಿಲ್ಲದ ಭೂಮಿಯನ್ನು, ಅವುಗಳ ಐತಿಹಾಸಿಕ ನಿರಂತರತೆಯನ್ನು ಕಾಪಾಡುವ ಕೊಡವ ಬುಡಕಟ್ಟು ಜನಾಂಗದ ಬಗ್ಗೆ ನಡೆಯುತ್ತಿರುವ ಜನಾಂಗಶಾಸ್ತ್ರ ಅಧ್ಯಯನವನ್ನು ಡಯಾಬೊಲಿಕ್ ‘ಎಟಿಕ್’ ವಿಧಾನದಲ್ಲಿ ಹಳಿ ತಪ್ಪಿಸಲು ಪ್ರಯತ್ನಿಸುತ್ತಿರುವದಾಗಿ ಆಯೋಗದ ಗಮನವನ್ನು ಸೆಳೆಯಿತು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾದ ಅನಂತ್ ನಾಯಕ್ ಎನ್., ವಕೀಲ, ಡಾ. ಟಿ.ಆರ್. ಚಂದ್ರಶೇಖರ್, ಚಿಂತಕ ಮತ್ತು ಅರ್ಥಶಾಸ್ತ್ರಜ್ಞ ಬಿ. ರಾಜ್ ಶೇಖರ್‍ಮೂರ್ತಿ, ಸಾಮಾಜಿಕ ಕಾರ್ಯಕರ್ತರು ಇದ್ದರು.