ಮಡಿಕೇರಿ, ಜೂ. 25: ಭಾರತದ ಗಡಿಯಲ್ಲಿ ನೆರೆಯ ರಾಷ್ಟ್ರಗಳ ಉಪಟಳ ವಿರುದ್ಧ ಸೇನೆಯ ಕಟ್ಟೆಚ್ಚರದೊಂದಿಗೆ ಕೇಂದ್ರ ಸರಕಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ತೆಗೆದುಕೊಂಡಿರುವ ಮುಂಜಾಗ್ರತೆ ಮತ್ತು ರಾಜತಾಂತ್ರಿಕ ಕ್ರಮಗಳು, ಕಾಶ್ಮೀರ ವಿಚಾರ, ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ರೂಪುರೇಷೆ ಮುಂತಾದ ವಿಚಾರಗಳನ್ನು ಬಿಜೆಪಿ ಕಾರ್ಯಕರ್ತರು ಜನರಲ್ಲಿ ತಿಳಿಸುವ ಕೆಲಸವಾಗಬೇಕೆಂದು ರಾಜ್ಯ ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಲಹೆ ನೀಡಿದರು.
ಇಂದು ಜಿಲ್ಲಾ ಪ್ರವಾಸ ಸಂದರ್ಭ ಬಿಜೆಪಿ ಕಚೇರಿಗೆ ಆಗಮಿಸಿದ ಅವರು, ಪಕ್ಷದ ಪ್ರಮುಖ ರೊಂದಿಗೆ ಸಮಾ ಲೋಚನೆ ನಡೆಸಿದರಲ್ಲದೆ, ದೇಶದ ಪರಿಸ್ಥಿತಿ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಿಳಿಸುವುದು ಬಿಜೆಪಿ ಮುಖಂಡರ ಜವಾಬ್ದಾರಿ ಎಂದು ನೆನಪಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಕೊರೊನಾ ನಡುವೆ ವೀಡಿಯೋ ಸಂಪರ್ಕ ಜಾಲದೊಂದಿಗೆ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದು ಗಮನ ಸೆಳೆದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಪಕ್ಷದ ಪದಾಧಿಕಾರಿಗಳಾದ ಬಿ.ಕೆ. ಅರುಣ್ ಕುಮಾರ್, ಡೀನ್ ಬೋಪಣ್ಣ, ಪಿ.ಡಿ. ಪೊನ್ನಪ್ಪ, ಮನು ಮಂಜುನಾಥ್, ಮಹೇಶ್ ಜೈನಿ, ಅನಿತಾ ಪೂವಯ್ಯ, ನವೀನ್ ಪೂಜಾರಿ, ನಾಗೇಶ್, ಅಪ್ಪಣ್ಣ, ಸವಿತಾ ರಾಜೇಶ್, ಬಿ.ಎಂ. ರಾಜೇಶ್, ಪ್ರೇಮಾ ರಾಘವಯ್ಯ ಮೊದಲಾದವರು ಪಾಲ್ಗೊಂಡಿದ್ದರು.