ಕುಶಾಲನಗರ, ಜೂ. 25: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದೃಢೀಕರಣವಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಗಂಟಲು ದ್ರವ ಪರೀಕ್ಷೆಗೆ ಸರಕಾರಿ ಆಸ್ಪತ್ರೆಯ ಕೋವಿಡ್-19 ಪರೀಕ್ಷಾ ಕೇಂದ್ರದ ಮುಂಭಾಗ ಮುಗಿಬಿದ್ದ ದೃಶ್ಯ ಕಂಡುಬಂದಿದೆ. ಪಟ್ಟಣದ ರಥಬೀದಿ, ಕೂಡ್ಲೂರು ಮತ್ತು ನೆರೆಯ ಮರಡಿಯೂರು ಗ್ರಾಮಗಳಲ್ಲಿ ಎರಡು ದಿನಗಳಲ್ಲಿ ಮೂರು ಕೊರೊನಾ ಪಾಸಿಟಿವ್ ವರದಿಯಾದ ಹಿನ್ನೆಲೆಯಲ್ಲಿ ಆತಂಕಗೊಂಡ ಜನರು

ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಾಬ್ ಟೆಸ್ಟ್‍ಗೆ ಮಾಡಿಸಿಕೊಳ್ಳಲು ಸಾಲಾಗಿ ನಿಂತ ದೃಶ್ಯ ಗೋಚರಿಸಿತು.

ಆತಂಕಗೊಂಡಿದ್ದ ಜನರ ನೂಕುನುಗ್ಗಲು ಉಂಟಾದ ಸಂದರ್ಭ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಕೂಡ ಆಗಮಿಸಬೇಕಾಯಿತು. 50 ಕ್ಕೂ ಅಧಿಕ ಮಂದಿ ಗಂಟಲು ದ್ರವ ಪರೀಕ್ಷೆಗೆ ತಾಮುಂದು ನಾಮುಂದು ಎನ್ನುವಂತೆ ಸಾಲಾಗಿ ನಿಂತ ದೃಶ್ಯ ಕಂಡುಬಂದಿದೆ.