ಸೋಮವಾರಪೇಟೆ: ಕೊರೊನಾ ಲಾಕ್‍ಡೌನ್ ಸಂದರ್ಭ ಶ್ರಮಿಸಿದ ಚಾಲಕರು ಗಳನ್ನು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದಿಂದ ಸನ್ಮಾನಿಸಲಾಯಿತು.
‘ಚಾಲಕ ಚೈತನ್ಯ ಭವ’ ಕಾರ್ಯಕ್ರಮದಡಿ ಇಲ್ಲಿನ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಚಾಲಕರು ಗಳಾಗಿ ಸೇವೆ ಸಲ್ಲಿಸಿದ 9 ಮಂದಿಯನ್ನು ಗೌರವಿಸಲಾಯಿತು.
ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿಗಳ ಜೀಪ್ ಚಾಲಕ ಕುಮಾರ್, ವೃತ್ತ ನಿರೀಕ್ಷಕರ ಜೀಪ್ ಚಾಲಕ ನತಾಫ್, ಪಟ್ಟಣ ಪಂಚಾಯಿತಿ ವಾಹನ ಚಾಲಕರುಗಳಾದ ಶೇಖರ್, ಆದಿಲ್, ಆಂಬ್ಯುಲೆನ್ಸ್ ಚಾಲಕ ನಂಜಪ್ಪ, 108 ಆಂಬ್ಯುಲೆನ್ಸ್ ಚಾಲಕ ಅರುಣ್, ತಹಶೀಲ್ದಾರ್‍ರ ಜೀಪ್ ಚಾಲಕ ರತನ್‍ಲಾಲ್, ಕರವೇ ವತಿಯಿಂದ ವ್ಯವಸ್ಥೆಗೊಳಿಸಿದ್ದ ಎರಡು ವಾಹನಗಳಲ್ಲಿ, 41 ದಿನಗಳ ಕಾಲ ವೇತನವಿಲ್ಲದೇ ಸ್ಥಳೀಯ ರೋಗಿಗಳನ್ನು ಸಾಗಿಸಿದ ಚಾಲಕರುಗಳಾದ ಕಿರಣ್ ಮತ್ತು ದಿವಾಕರ್ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿದರು.
ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್.ಮಹೇಶ್, ವೇದಿಕೆಯಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯ ಸಚಿನ್ ಪಟೇಲ್, ಪ್ರಮುಖರಾದ ಗಣೇಶ್ ಉಪಸ್ಥಿತರಿದ್ದರು. ಕರವೇ ಪದಾಧಿಕಾರಿಗಳಾದ ಕೆ.ಪಿ. ಸುದರ್ಶನ್, ಪುರುಷೋತ್ತಮ್, ಅನಿತಾ ಶುಭಾಕರ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.
ಗೌಡಳ್ಳಿ
ಗೌಡಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಕೊರೊನಾ ಸೇವೆಗಾಗಿ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ, ಪ್ರೋತ್ಸಾಹ ಧನ ನೀಡಲಾಯಿತು.
ಆಶಾ ಕಾರ್ಯಕರ್ತರಾದ ಜಿ.ಆರ್. ರುಕ್ಮಿಣಿ, ಹೆಚ್.ಆರ್. ಇಂದುಮತಿ, ಬಿ.ಟಿ. ಪ್ರೇಮ, ಎಸ್.ಎಂ. ಶೈಲಾ, ಸಿ.ಟಿ. ವೀಣಾ, ಸುಧಾಮಣಿ, ಬಿ.ಎಸ್. ಈಶ್ವರಿ, ಎಸ್.ಆರ್. ಭವ್ಯ, ಎಸ್.ಎಸ್. ಜಯಲಕ್ಷ್ಮಿ, ಹೆಚ್.ಆರ್. ಗೀತಾ ಅವರುಗಳು ಸನ್ಮಾನ ಸ್ವೀಕರಿಸಿ ಅನಿಸಿಕೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಎಸ್.ಆರ್. ಸುರೇಶ್, ಉಪಾಧ್ಯಕ್ಷ ಎನ್.ಎಸ್. ಪರಮೇಶ್, ನಿರ್ದೇಶಕರಾದ ವಿ.ಎನ್. ನಾಗರಾಜ್, ಪುಷ್ಪ ಸುರೇಶ್, ವಾಣಿ ಶಿವಕುಮಾರ್, ಮಮತ ಅಶೋಕ್, ಸುಮಿತ್ರ ಮಹೇಶ್, ಜಿ.ಪಿ. ಸುನಿಲ್, ಸಿ.ಈ. ವೆಂಕಟೇಶ್, ಕೆ.ಜಿ. ದಿನೇಶ್, ಜಿ.ಈ. ಸುರೇಶ್, ಮೇಲ್ವಿಚಾರಕ ಜೆ.ಪಿ. ಜಯಪ್ರಕಾಶ್, ಕಾರ್ಯ ನಿರ್ವಹಣಾಧಿಕಾರಿ ಕೆ.ಕೆ. ಶಿವಪ್ರಕಾಶ್ ಉಪಸ್ಥಿತರಿದ್ದರು.
ಸೋಮವಾರಪೇಟೆ: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‍ಗಳನ್ನು ಸನ್ಮಾನಿಸಲಾಯಿತು.
ಗ್ರಾ.ಪಂ. ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ದಿವ್ಯ, ತಣ್ಣೀರುಹಳ್ಳದ ಲಲಿತ, ಮಸಗೋಡಿನ ದಿವ್ಯ, ನೇಗಳ್ಳೆ ಕರ್ಕಳ್ಳಿಯ ಶೋಭ, ಅಂಗನವಾಡಿ ಕಾರ್ಯಕರ್ತೆಯರಾದ ಸ್ವಾತಿ, ಪುಟ್ಟಲಕ್ಷ್ಮಮ್ಮ, ರಾಧಾ, ಪದ್ಮಾವತಿ, ಕುಸುಮ, ಉಷಾ, ಆಶಾ ಕಾರ್ಯಕರ್ತೆಯರಾದ ಮುತ್ತಮ್ಮ, ಶೃತಿ, ಶಿಲ್ಪ, ಜಯಂತಿ ಶೆಟ್ಟಿ, ಭವ್ಯ ಮೇಘ, ಗ್ರಾ.ಪಂ. ಸಿಬ್ಬಂದಿಗಳಾದ ಆನಂದ, ಭಾನುಮತಿ ಅವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಉಪಾಧ್ಯಕ್ಷ ಬಿ.ಬಿ. ದಿವಾಕರ್ ಸೇರಿದಂತೆ ಸದಸ್ಯರುಗಳು, ಅಭಿವೃದ್ಧಿ ಅಧಿಕಾರಿ ಪಿ.ಎಸ್. ನೈನಾ, ಕಾರ್ಯದರ್ಶಿ ಬಿ.ಎಸ್. ಸುರೇಶ್ ಅವರುಗಳು ಉಪಸ್ಥಿತರಿದ್ದರು.