ಗುಡ್ಡೆಹೊಸೂರು, ಜೂ. 24: ಇಲ್ಲಿನ ಯುವ ಬ್ರಿಗೇಡ್ ವತಿಯಿಂದ ಗ್ರಾಮಸ್ಥರಿಗೆ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
ಗುಡ್ಡೆಹೊಸೂರಿನ ಯುವ ಬ್ರಿಗೇಡ್ ತಂಡವು ಈ ಹಿಂದೆ ಹಲವಾರು ಬಾರಿ ದೇವಸ್ಥಾನದ ಆವರಣ ಮತ್ತು ರಸ್ತೆಯ ಬದಿಯಲ್ಲಿ ಕಸ ತೆಗೆದು ಸ್ವಚ್ಛ ಭಾರತ್ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.
ಈ ಕಾರ್ಯಕ್ರಮದಲ್ಲಿ ಗುಡ್ಡೆಹೊಸೂರಿನ ಯುವ ಬ್ರಿಗೇಡ್‍ನ ಸಂಘಟನಾ ಪ್ರಮುಖ ಬಟ್ಟುಮನೆ ರಮೇಶ್, ಸದಸ್ಯರಾದ ಹರೀಶ್, ದಿವಾಕರ, ರಂಗನಾಥ್, ಬಿ.ಎಸ್. ಕಾರ್ಯಪ್ಪ ಮುಂತಾದವರು ಹಾಜರಿದ್ದರು.