ನಾಪೆÇೀಕ್ಲು, ಜೂ. 22: 2019ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ನಾಪೆÇೀಕ್ಲುವಿನ ಹಳೇ ತಾಲೂಕುವಿನಿಂದ ಮೂರ್ನಾಡುವರೆಗೆ ಪಾದಯಾತ್ರೆ ನಡೆಯಿತು. ಈ ಸಂದರ್ಭ ರಾಜ್ಯ ಸರಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ನಮ್ಮದೆಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿದರು ನಾಪೆÇೀಕ್ಲು ಪಟ್ಟಣದಲ್ಲಿ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ಜೆಡಿಎಸ್‍ನ ನಡೆ ನಿರಾಶ್ರಿತರ ಕಡೆ ಎಂಬ ಧ್ಯೇಯೋದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 2018ರಲ್ಲಿ ನಡೆದ ಪ್ರಾಕೃತಿಕ ವಿಕೋಪದಲ್ಲಿ ಆಗಿನ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಮನೆ ಕಳೆದುಕೊಂಡವರಿಗೆ 800 ನೂತನ ಮನೆಗಳನ್ನು ನಿರ್ಮಿಸಿದ್ದಾರೆ. ಆದರೆ, 2019ರಲ್ಲಿ ನಡೆದ ಪ್ರಕೃತಿ ವಿಕೋಪದಲ್ಲಿ ಮನೆ
(ಮೊದಲ ಪುಟದಿಂದ) ಕಳೆದುಕೊಂಡವರಿಗೆ ಬಿಜೆಪಿ ಸರಕಾರ ಒಂದು ಮನೆಯನ್ನೂ ಕೂಡ ನಿರ್ಮಿಸಿಕೊಟ್ಟಿಲ್ಲ. ಜೆಡಿಎಸ್ ಸಾಧನೆಯನ್ನು ತನ್ನದೆಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ರಸ್ತೆಯಿಲ್ಲ. ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಿದೆ. ನಿರಾಶ್ರಿತರು ಬೀದಿ ಪಾಲಾಗುತ್ತಿದ್ದಾರೆ ಎಂದು ದೂರಿದ ಅವರು ಜಿಲ್ಲೆಯಲ್ಲಿ ಮಳೆ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ಅಪಾಯದ ಪ್ರದೇಶದಲ್ಲಿ ವಾಸವಿರುವ ಜನರಿಗೆ ಸೂಕ್ತ ಭದ್ರತೆ ನೀಡುವದನ್ನು, ಸೂರು ನೀಡುವದನ್ನು ಬಿಟ್ಟು ಮನೆ ಖಾಲಿ ಮಾಡಿ ಎಂದು ನೋಟೀಸ್ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶದಂತೆ ಜಿಲ್ಲಾ ಜೆಡಿಎಸ್ ನಿರಾಶ್ರಿತರ ಸಹಕಾರಕ್ಕೆ ನಿಲ್ಲಲಿದೆ. ನೊಂದ ಜನರೊಂದಿಗೆ ಜೆಡಿಎಸ್ ಸದಾ ಇರುತ್ತದೆ ಎಂದರು.
ನಿರಾಶ್ರಿತರ ಪರ ಮಾತನಾಡಿದ ನಾಪೆÇೀಕ್ಲು ಚೆರಿಯಪರಂಬುವಿನ ಪೀರು ಸಾಬ್, 2018-19ರಿಂದ ನಾವು ವಾಸಿಸುವ ಸ್ಥಳ ಮುಳುಗಡೆಯಾಗುತ್ತಿದೆ. ಆದರೂ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಈ ಭಾಗದಲ್ಲಿ 150 ಮನೆಗಳಿದ್ದು, ಈಗಾಗಲೇ ಈ ಮನೆಯವರಿಗೆ ಮನೆ ತೊರೆದು ಸಂಬಂಧಿಕರ ಮನೆಗಳಿಗೆ ತೆರಳುವಂತೆ ನೋಟೀಸ್ ನೀಡಲಾಗಿದೆ ಎಂದು ದೂರಿದರು.
ಪಾದಯಾತ್ರೆಯಲ್ಲಿ ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಎಂ.ಎ.ಮನ್ಸೂರ್ ಅಲಿ, ಪಕ್ಷದ ಹಿರಿಯರಾದ ಬೊಪ್ಪೇರ ಸಿ.ಕಾವೇರಪ್ಪ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ರಾಜ್ಯ ಕಾರ್ಯದರ್ಶಿ ಪಿ.ಎ.ಯೂಸುಫ್, ಮಡಿಕೇರಿ ತಾಲೂಕು ಅಧ್ಯಕ್ಷ ಗೌತಮ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮತೀನ್, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ.ರಶೀದ್, ಮತ್ತಿತರರು ಇದ್ದರು.