ಕೂಡಿಗೆ, ಜೂ, 22: ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಸೋಮವಾರಪೇಟೆ ತಾಲೂಕು ಮಣ್ಣು ಆರೋಗ್ಯ ಅಭಿಯಾನ, ಕೇಂದ್ರ ಪುರಸ್ಕøತ ಮಣ್ಣು ಆರೋಗ್ಯ ಚೀಟಿ, ಕಾರ್ಯಕ್ರಮ ಮತ್ತು ರೈತ ಮೇಳ ಕಾರ್ಯಕ್ರಮವು ತಾ. 30 ರಂದು ನಂಜರಾಯಪಟ್ಟಣದ ಅಂಗನವಾಡಿ ಸಭಾಂಗಣದಲ್ಲಿ ನೆಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆ ಯನ್ನು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್. ಮಂಜುಳ ನೆರವೇರಿಸಲಿದ್ದಾರೆ. ವಸ್ತು ಪ್ರದರ್ಶನ ಉದ್ಘಾಟನೆ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎಂ. ಲತೀಫ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಸದಸ್ಯ ಎಂ.ಕೆ. ಚಂಗಪ್ಪ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ಬಿ. ಸುನೀತಾ ತಾಲೂಕು ಪಂಚಾಯತ್ ಸದಸ್ಯರುಗಳಾದ ಬಲ್ಲಾರಂಡ ಮಣಿ ಉತ್ತಪ್ಪ, ಸುಹಾದ್ ಅಶ್ರಫ್, ಪುಪ್ಪು ಜನಾರ್ಧನ್ ಮತ್ತು ನಂಜರಾಯಪಟ್ಟಣ ಸಹಕಾರ ಸಂಘದ ಅಧ್ಯಕ್ಷ ಮುರುಳಿ ಮಾದಯ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೆÇನ್ನಪ್ಪ, ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಡಾ.ಕೆ.ವಿ. ವೀರೇಂದ್ರ ಕುಮಾರ್ ಡಾ. ವೆಂಕಟರಮಣಪ್ಪ ಡಾ, ನಾಜಪ್ಪ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಹೆಚ್.ಎಸ್. ರಾಜಶೇಖರ ತಿಳಿಸಿದ್ದಾರೆ.