ಚೆಟ್ಟಳ್ಳಿ, ಜೂ. 22: ಎಸ್.ಡಿ.ಪಿ.ಐ. ಕುಶಾಲನಗರ ಘಟಕದ ವತಿಯಿಂದ ಎಸ್.ಡಿ.ಪಿ.ಐ ಪಕ್ಷದ 11 ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.

ದ್ವಜಾರೋಹಣವನ್ನು, ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹಾಗೂ ಕುಶಾಲನಗರ ನಗರಾಧ್ಯಕ್ಷ ಬಾಷಾ ನೆರವೇರಿಸಿದರು.

ಸರಕಾರ ನೀಡಿರುವ ಎಲ್ಲಾ ಸೂಚನೆಯನ್ನು ಅನುಸರಿಸಿ ಬಹಳ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ, ಭಾರತ -ಚೀನಾದ ಗಡಿಯಲ್ಲಿ ಹುತಾತ್ಮರಾದ ಭಾರತದ ವೀರ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.

ಸಂಸ್ಥಾಪನಾ ದಿನವನ್ನು ಉದ್ದೇಶಿಸಿ ನಗರಾಧ್ಯಕ್ಷ ಬಾಷಾ, ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹಾಗೂ ಅತಿಥಿಗಳಾದ ತಾಲೂಕು ಮುಸ್ಲಿಂ ಒಕ್ಕೂಟ, ಕುಶಾಲನಗರ ಇದರ ಅಧ್ಯಕ್ಷ ಹನೀಫ್ ಮಾತನಾಡಿದರು.

ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಕುಶಾಲನಗರ ನಗರದ ಕಾರ್ಯನಿರತ ಟ್ರಾಫಿಕ್ ಪೆÇಲೀಸ್ ಸಿಬ್ಬಂದಿಗಳಿಗೆ, ಗೃಹ ರಕ್ಷಣಾ ಸಿಬ್ಬಂದಿಗಳಿಗೆ, ಕೊಪ್ಪ ಚೆಕ್ ಪೆÇೀಸ್ಟ್ ಪೆÇಲೀಸ್ ಸಿಬ್ಬಂದಿಗಳಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.

ಈ ಸಂದರ್ಭ ಕುಶಾಲನಗರ ಎಸ್.ಡಿ.ಪಿ.ಐ ಉಪಾಧ್ಯಕ್ಷ ಮನ್ಸೂರ್ ಹಾಗೂ ಎಸ್.ಡಿ.ಪಿ.ಐ ಕಾರ್ಯಕರ್ತರು ಉಪಸ್ಥಿತರಿದ್ದರು.