ಗೋಣಿಕೊಪ್ಪ ವರದಿ, ಜೂ. 22: ಮಳೆಗೆ ಬಾಳೆಲೆ ಸಮೀಪ ಮರ ಬಿದ್ದು ಸಂಪರ್ಕ ಕಡಿತ ಉಂಟಾಗಿತ್ತು. ಅಲ್ಲಿನ ಕಳ್ಳಿಚಂಡ ರವಿ ಎಂಬವರ ಮನೆ ಸಮೀಪದ ಹಲವು ರಸ್ತೆಗಳಿರುವ ಜಂಕ್ಷನ್‍ನಲ್ಲಿ ರಸ್ತೆಗೆ ಅಡ್ಡವಾಗಿ ಮರ ಉರುಳಿ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಯಿತು. ನಂತರ ಸೋಮವಾರ ಮಧ್ಯಾಹ್ನ ಮರ ತೆರವುಗೊಳಿಸಲಾಯಿತು.

ಜಿಲ್ಲೆಯ ಭಾಗಮಂಡಲಕ್ಕೆ 2.50 ಇಂಚು ಮಳೆಯಾಗಿದ್ದು, ಜಿಲ್ಲೆಯಲ್ಲಿ ಸುರಿದ ಹೆಚ್ಚು ಪ್ರಮಾಣದ ಮಳೆಯಾಗಿದೆ. ತಾ. 23 ರಂದು ಜಿಲ್ಲೆಯ ಬಹುತೇಕ ಕಡೆ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ ಎಂದು ಗೋಣಿಕೊಪ್ಪ ಕೆವಿಕೆ ಕೃಷಿ ಹವಮಾನ ಘಟಕ ತಿಳಿಸಿದೆ.

ಉಳಿದಂತೆ ಗೋಣಿಕೊಪ್ಪ 0.68 ಇಂಚು, ಕೋಣಗೇರಿ 1.18 ಇಂಚು, ರಾಜಾಪುರ 0.55 ಇಂಚು ಮಳೆಯಾಗಿದೆ. ಸೋಮವಾರ ಮೋಡ ಕವಿದ ವಾತಾವರಣ ಇತ್ತು.