ನಾಪೆÇೀಕ್ಲು ನಿವಾಸಿ ಎಂ.ಕೆ. ನಜೀರ್ (70) ತಾ. 22 ರಂದು ಸಂಜೆ ಮೈಸೂರಿನಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪತ್ರಕರ್ತರಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದರು.

ಟಕಸಾಪದ ಹಿರಿಯ ಸದಸ್ಯರು, ಪಿಟಿಲು, ಗಮಕ ಕಲಾವಿದರು ಆಗಿದ್ದ ಸೋಮವಾರಪೇಟೆಯ ಚಂದ್ರಶೇಖರಯ್ಯ (97) ಅವರು ತಾ.21ರ ಮದ್ಯರಾತ್ರಿ ನಿಧನರಾದರು.

ಟಚೇರಂಬಾಣೆ ಬಳಿಯ ಕೊಳಗದಾಳು ಗ್ರಾಮ ನಿವಾಸಿ, ದಿ. ಹೊಸೊಕ್ಲು ಗಣಪತಿ ಅವರ ಪತ್ನಿ ಕಾವೇರಮ್ಮ (80) ತಾ. 22 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 23 ರಂದು (ಇಂದು) ನಡೆಯಲಿದೆ. ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.