ಕೂಡಿಗೆ, ಜೂ. 22: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ವಿನ ಉದ್ಭವ ಶ್ರೀ ಬಸವೇಶ್ವರ ದೇವಾಲಯದ ಮುಂಭಾಗದಲ್ಲಿ ಹೆಬ್ಬಾವು ಪತ್ತೆಯಾಗಿದೆ.
ದೇವಾಲಯ ದಾರಿಯಲ್ಲಿ ಪಕ್ಕದ ಜಮೀನಿಗೆ ಹೋಗುವ ಸಂದರ್ಭದಲ್ಲಿ ಗ್ರಾಮಸ್ಥರು ನೋಡಿ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾರೆ. ಇಲಾಖೆಯವರು ಸುಂಟಿಕೊಪ್ಪದ ಸ್ನೇಕ್ ಸಜಿ ಅವರ ಸಹಾಯ ಪಡೆದು 6.54 ಅಡಿಗಳಿಗೂ ಉದ್ದದ ಹೆಬ್ಬಾವನ್ನು ಹಿಡಿದು ಅತ್ತೂರು ಮೀಸಲು ಅರಣ್ಯಕ್ಕೆ ಬಿಡಲಾಯಿತು.
ಅತ್ತೂರು ಅರಣ್ಯ ವಿಭಾಗದ ಉಪವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಅರಣ್ಯ ರಕ್ಷಕ ಸಚಿನ್ ಸೇರಿದಂತೆ ಗ್ರಾಮಸ್ಧರು ಇದ್ದರು.