ಪೆÇನ್ನಂಪೇಟೆ, ಜೂ. 22: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ಕೂಪದಿರ ಪೆÇನ್ನಪ್ಪ ಎಂಬವರ ಕಾಫಿ ತೋಟದಲ್ಲಿ ಸೇರಿಕೊಂಡಿದ್ದ 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಗೋಣಿಕೊಪ್ಪಲಿನ ಉರಗ ಪ್ರೇಮಿ ಸ್ನೇಕ್ ಶರತ್ ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಕೂಟಿಯಾಲ ರಕ್ಷಿತಾರಣ್ಯಕ್ಕೆ ಬಿಟ್ಟರು. ಇದು ಶರತ್ ಅವರು ರಕ್ಷಿಸಿರುವ 23ನೇ ಕಾಳಿಂಗ ಸರ್ಪ ವಾಗಿದೆ. ಕಾರ್ಯಾಚರಣೆ ಸಂದರ್ಭ ಗೋಣಿಕೊಪ್ಪಲಿನ ಉರಗ ಪ್ರೇಮಿಗಳಾದ ಭಾವೆ ಹಾಗೂ ಸಂತೋಷ್ ಇದ್ದರು.