ಸುಂಟಿಕೊಪ್ಪ, ಜೂ. 18: ಸುಂಟಿಕೊಪ್ಪದ ವಿವಿಧ ಬಡಾವಣೆಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ದಿಸೆಯಲ್ಲಿ ಕ್ರಿಮಿನಾಶಕಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಸಿಂಪಡಿಸಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಬಡಾವಣೆಗಳಲ್ಲಿ ಕ್ರಿಮಿನಾಶಕ ಜೌಷಧಿಯನ್ನು ಪಂಚಾಯಿತಿ ಪೌರಕಾರ್ಮಿಕರು ಸಿಂಪಡಿಸಿದರು. ಪೊಲೀಸ್ ಠಾಣಾ ಆವರಣದಲ್ಲಿ ಬೆಳೆದು ನಿಂತ ಗಿಡ ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.