ಮಡಿಕೇರಿ, ಜೂ. 18: ನಗರ ಬಿಜೆಪಿ ಪದಾಧಿಕಾರಿಗಳನ್ನು ನೇಮಿಸಿ, ಅಧ್ಯಕ್ಷ ಮನು ಮಂಜುನಾಥ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಉಪಾಧ್ಯಕ್ಷರಾಗಿ ಅರುಣ್‍ಶೆಟ್ಟಿ, ರಜೀ ಗೌರಮ್ಮ, ಪ್ರೇಮಾರಾಘವಯ್ಯ, ಪಿ.ಜಿ. ಸುಕುಮಾರ್, ಸಿ. ಮನು ನೇಮಕಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ಅಪ್ಪಣ್ಣ ಹಾಗೂ ಉಮೇಶ್ ಸುಬ್ರಮಣಿ, ಕಾರ್ಯದರ್ಶಿಗಳಾಗಿ ಜಿ.ಜಿ. ಬಾಲಕೃಷ್ಣ, ಲಕ್ಷ್ಮೀ, ಕಲಾವತಿ, ಕನ್ನಿಕೆ, ಪ್ರಶಾಂತ್, ಬಿ.ಪಿ. ದಿಸು ಆಯ್ಕೆಗೊಂಡಿದ್ದಾರೆ. ಖಜಾಂಚಿಯಾಗಿ ಎಸ್. ಮುರುಗನ್ ನಿಯುಕ್ತಿಯಾಗಿದ್ದಾರೆ. ಯುವ ಮೋರ್ಚಾ ಅಧ್ಯಕ್ಷರಾಗಿ ನವೀನ್ ಪೂಜಾರಿ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸವಿತಾ ರಾಖೇಶ್, ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿ ಗಣೇಶ್, ಎಸ್.ಟಿ. ಮೋರ್ಚಾ ಅಧ್ಯಕ್ಷರಾಗಿ ನಾಗೇಶ್, ಹಿಂದುಳಿದ ಮೋರ್ಚಾ ಅಧ್ಯಕ್ಷರಾಗಿ ಬಿ.ಎಸ್. ರಾಜೇಶ್ ಹಾಗೂ ಸಮಿತಿ ಸದಸ್ಯರಾಗಿ 41 ಮಂದಿಯನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.