ಸುಂಟಿಕೊಪ್ಪ,ಜೂ.17: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ, ಕೊರೊನಾ ಹೆಮ್ಮಾರಿಯಿಂದ ಇಡೀ ವಿಶ್ವವೇ ತತ್ತರಿಸಿದ ಸಂದರ್ಭದಲ್ಲಿ ಸಂದ್ವಿಗ್ನ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ಅಧೀಕ್ಷಕಿ ಸುಮನ್ ಡಿ. ಪಿ. ಅವರು ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಆದರೆ ಪತ್ರಿಕೆಯೊಂದರಲ್ಲಿ ಕಪೋಲ ಕಲ್ಪಿತ ವರದಿಯ ಮೂಲಕ ದಕ್ಷ ಅಧಿಕಾರಿಗಳ ತೇಜೋವದೆ ಮಾಡಿ ಆತ್ಮಸ್ಥೆರ್ಯ ಕುಗ್ಗಿಸುವ ಪ್ರಯತ್ನ ನಡೆಸಿರುವುದು ಖಂಡನೀಯ ಎಂದು ಜಿಲ್ಲಾ ಪಂಚಾಯ್ ಸದಸ್ಯ ಪಿ.ಎಂ. ಲತೀಫ್ ಹೇಳಿದ್ದಾರೆ. ಜಿಲ್ಲೆಯ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳನ್ನು ತೇಜೋವದೆ ಮಾಡಿರುವ ಪತ್ರಕರ್ತ ವಸಂತ್ ವಿರುದ್ಧ ಅಸಮಾಧಾನಗೊಂಡಿರುವ ವೀರಾಜಪೇಟೆ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ವರದಿಯನ್ನು ಖಂಡಿಸಿದ್ದಾರೆ. ನಾಗರಿಕ ವೇದಿಕೆಯಿಂದ ಜಿಲ್ಲಾಧಿಕಾರಿ ಹಾಗೂ ವರಿಷ್ಠಾಧಿಕಾರಿಗಳನ್ನು ಸನ್ಮಾನಿಸಿದ ಸಂದರ್ಭ ಮಾಡಿರುವ ಆರೋಪ ಬಗ್ಗೆ ದಾಖಲೆ ಸಹಿತ ಕಚೇರಿಗೆ ಸಲ್ಲಿಸುವಂತೆ ವಸಂತ್‍ಗೆ ಎಚ್ಚರಿಕೆ ನೀಡಿದ್ದಾರೆ.