ಗುಡ್ಡೆಹೊಸೂರು, ಜೂ. 17: ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ಗುಡ್ಡೆಹೊಸೂರಿ ನಲ್ಲಿ ಸಂಚಾರಿ ರಥಕ್ಕೆ ಚಾಲನೆ ನೀಡಲಾಯಿತು. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ಯಾಂ ತಮ್ಮಯ್ಯ ಅವರು ಚಾಲನೆ ನೀಡಿದರು. ಈ ಸಂದÀರ್ಭ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಶಿರಾಜ್‍ಆಹಮ್ಮದ್, ನಂದೀಶ್, ಸಮೀರ್, ಗ್ರಾ.ಪಂ. ಸದಸ್ಯ ಕಾವೇರಪ್ಪ, ಕಾರ್ಯದರ್ಶಿ ನಂಜುಂಡೇಸ್ವಾಮಿ, ವಿಜಯ್, ಕೌಶಿಕ್ ಮುಂತಾದವರು ಹಾಜರಿದ್ದರು. ಈ ಸಂದÀರ್ಭ ವಾಹನದಲ್ಲಿ ಗ್ರಾಮದ ಗಲ್ಲಿಗಲ್ಲಿಗಳಲ್ಲಿ ಸಂಚರಿಸಿ ಬಾಲಕಾರ್ಮಿಕ ನಿರ್ಮೂಲನೆ ಮತ್ತು ಅಪರಾಧದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ನಡೆಸಲಾಯಿತು. ‘ಅರಳುವ ಪ್ರತಿಭೆಗಳನ್ನು ಮೊಗ್ಗಿನಲ್ಲಿ ಚಿವುಟಬೇಡಿ’ ಎಂಬ ಘೋಷವಾಖ್ಯದೊಂದಿಗೆ ಜಾಥಾ ನಡೆಸಲಾಯಿತು. 14 ವರ್ಷ ಪ್ರಾಯದ ಒಳಗಿನ ಮಕ್ಕಳು ಕಾರ್ಮಿಕರಾಗಿ ದುಡಿಯುವುದು ಮತ್ತು 18 ವರ್ಷ ವಯೋಮಾನದ ಕಿಶೋರಿಯರು ಅಪಾಯದ ಉದ್ದಿಮೆಯಲ್ಲಿ ದುಡಿಯುವುದು, ಮತ್ತು ದುಡಿಸುವುದು ಅಪರಾಧ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲಾಯಿತು.

- ಗಣೇಶ್ ಕುಡೆಕ್ಕಲ್.