ಕಡಂಗ, ಜೂ. 17: ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಕೆ.ಎಂ. ಫಾರೂಕ್ ಗುಂಡಿಕೆರೆ ಅವರನ್ನು ಹೆಚ್ಐಜಿ ದುಬೈ ಸಂಘದ ವತಿಯಿಂದ ಗೌರವಿಸಲಾಯಿತು. ಎಸ್ವೈಎಸ್ ಉಪಾಧ್ಯಕ್ಷÀ ಅಲಿ ಉಸ್ತಾದ್ ಪ್ರಾರ್ಥನೆ ನೆರವೇರಿಸಿದರು.
ಅಧ್ಯಕ್ಷತೆಯನ್ನು ಜಮಾಅತ್ನ ಅಧ್ಯಕ್ಷ ಎಂ.ಎ. ಅಬ್ಬಾಸ್ ವಹಿಸಿದ್ದರು. ಕಾರ್ಯದರ್ಶಿ ಎಂ.ಎ. ಇಸ್ಮಾಯಿಲ್ ಸ್ವಾಗತಿಸಿದರು. ಅಹ್ಮದ್ ಮದನಿ ಉಸ್ತಾದ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಕೆ.ಎಂ. ಫಾರೂಕ್, ದುಬೈ ಸಂಘದ ಅಧ್ಯಕ್ಷ ಎಂ.ಯು. ನಿಸಾರ್, ಉಬೈದ್ ಕಾರ್ಯಕ್ರಮದಲ್ಲಿ ದುಬೈ ಸಂಘದ ಪದಾಧಿಕಾರಿಗಳಾದ ಎಂ.ಎ. ಅಕ್ಬರ್, ಸಿ.ಎ. ಲತೀಫ್, ಸಿ.ಎಂ. ಸಮೀರ್, ಕೆ.ಹೆಚ್. ಸಲೀಂ, ಎಂ.ಪಿ. ಜಕರಿಯ ಊರಿನವರಾದ ಬದ್ರುದ್ದೀನ್, ರಿಯಾಸ್ ಫಾಳಿಲಿ ಇಸ್ಮಾಯಿಲ್ ಮುಸ್ಲಿಯಾರ್, ಎಂ.ಎ. ಶಫೀಕ್, ಎಂ.ಹೆಚ್. ಶಾಹಿದ್, ಎ.ಎ. ಸಲೀಂ, ಷಂಶುದ್ದೀನ್, ಇಬ್ರಾಹಿಂ ಹಾಗೂ ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.