ಮಡಿಕೇರಿ, ಜೂ. 14: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಹೆಚ್.ಡಿ. ಕುಮಾರಸ್ವಾಮಿ ಅವರ ಕುಟುಂಬ ಇಲ್ಲಿನ ರೆಸಾರ್ಟ್‍ವೊಂದರಲ್ಲಿ ಎರಡು ದಿನಗಳ ವಾಸ್ತವ್ಯ ಮುಗಿಸಿ ಈ ಸಂಜೆ ಹಾಸನದತ್ತ ನಿರ್ಗಮಿಸಿತು. ತಮ್ಮ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಮತ್ತು ಕುಟುಂಬ ಸದಸ್ಯರೊಂದಿಗೆ ಮೊನ್ನೆ ಇಲ್ಲಿಗೆ ಆಗಮಿಸಿರುವ ಕುಮಾರಸ್ವಾಮಿ ಕುಟುಂಬ ಇಂದು ಅಪರಾಹ್ನ ತನಕ ರೆಸಾರ್ಟ್‍ನಲ್ಲಿ ತಂಗಿದ್ದರು.ಯಾವುದೇ ಮಾಧ್ಯಮಗಳನ್ನು ಭೇಟಿಯಾಗಲು ಇಚ್ಚಿಸದೆ ಶಾಸಗಿ ಪ್ರವಾಸ ಬಂದಿದ್ದಾಗಿ ಹೇಳಿಕೊಂಡಿರುವ ಈ ಕುಟುಂಬದ ಸದಸ್ಯರು, ಮಧ್ಯಾಹ್ನದ ಭೋಜನ ಬಳಿಕ ನಿರ್ಗಮಿಸಿದ್ದು, ವ್ಯಾಪಕ ಪೊಲೀಸ್ ಭದ್ರತೆಯ ನಡುವೆ ತಾವು ಆಗಮಿಸಿದ್ದ ವಾಹನಗಳಲ್ಲಿ ಹೊರಟು ಹೋದುದ್ದಾಗಿ ಮೂಲಗಳಿಂದ ಹೊತ್ತಾಗಿದೆ.

ಮೊನ್ನೆ ಮಾಜಿ ಮುಖ್ಯಮಂತ್ರಿಗಳ ರೆಸಾರ್ಟ್ ವಾಸ್ತವ್ಯದ ಸುಳಿವಿನ ಮೇರೆಗೆ, ಅತ್ತ ಧಾವಿಸಿದ್ದ ಮಾಧ್ಯಮ ಮಿತ್ರರು ಪ್ರವೇಶ ನಿರಾಕರಣೆಯಿಂದ ಹತಾಶೆಗೊಂಡು ವಾಪಾಸಾಗಿದ್ದರು. ಇದು ತೀರಾ ಆ ಕುಟುಂಬದ ಖಾಸಗಿ ಭೇಟಿಯಾಗಿತ್ತು ಎಂದು ರೆಸಾರ್ಟ್ ಮೂಲಗಳಿಂದ ಗೊತ್ತಾಗಿದೆ.