ಗೋಣಿಕೊಪ್ಪಲು, ಜೂ.14: ನಿಯಂತ್ರಣ ತಪ್ಪಿದ ಕಾರೊಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕನಿಗೆ ಹಾಗೂ ಆಟೋರಿಕ್ಷಾದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.ಆಟೋ ಚಾಲಕ ಕಿರುಗೂರು ಗ್ರಾಮದ ಕಾಯಮಾಡ ಚಂಗಪ್ಪ ಹಾಗೂ ಪ್ರಯಾಣ ಮಾಡುತ್ತಿದ್ದ ಮಹಿಳೆ ಕಿರುಗೂರುವಿನ ಕಮಲ ಎಂದು ಗೊತ್ತಾಗಿದೆ.ಭಾನುವಾರ ಗೋಣಿಕೊಪ್ಪ ಲುವಿನ ಸಂತೆ ಮುಗಿಸಿದ ಕಿರುಗೂರುವಿನ ಕಮಲ ಎಂಬ ಮಹಿಳೆ ಕಿರುಗೂರು ಗ್ರಾಮದ ನಿವಾಸಿಯಾದ ಕಾಯಮಾಡ ಚಂಗಪ್ಪ ಎಂಬವರ ಆಟೋದಲ್ಲಿ ಗೋಣಿಕೊಪ್ಪ ದಿಂದ ಕಿರುಗೂರುವಿನ ಮನೆಯತ್ತ ಪ್ರಯಾಣ ಬೆಳೆಸಿದ್ದರು.
ಆಟೋರಿಕ್ಷಾ ಗೋಣಿಕೊಪ್ಪ - ಪೆÇನ್ನಂಪೇಟೆ ಮುಖ್ಯ ರಸ್ತೆಯ ಜೋಡುಬೀಟಿ ಬಳಿ ತೆರಳುತ್ತಿದ್ದಂತೆ ಓಯಸೀಸ್ ಕ್ಲಬ್ನ ಬಳಿ ಪೆÇನ್ನಂಪೇಟೆ ಯಿಂದ ಗೋಣಿಕೊಪ್ಪದತ್ತ ತೆರಳುತ್ತಿದ್ದ ಓಮಿನಿ ಕಾರು (ಕೆ.ಎ.12.8552) ನಿಯಂತ್ರಣ ತಪ್ಪಿ ಆಟೋರಿಕ್ಷಾ (ಕೆ.ಎ.12 ಎ.7678) ಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಆಟೋ ರಿಕ್ಷಾ ಚಾಲಕ ಹಾಗೂ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಆಟೋ ಹಾಗೂ ಕಾರು ಸಂಪೂರ್ಣ ಜಖಂಗೊಂಡಿದೆ. ಮುಖ್ಯ ರಸ್ತೆಯಲ್ಲಿ ಅಪಘಾತ ಸಂಭವಿಸಿದ ಪರಿಣಾಮ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು.
ಸ್ಥಳಕ್ಕೆ ಪೆÇನ್ನಂಪೇಟೆ ಪೆÇೀಲಿಸ್ ಠಾಣಾಧಿಕಾರಿ ಡಿ.ಕುಮಾರ್ ಹಾಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು. ಪೆÇನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರು ಚಾಲಕ ಕಿರುಗೂರು ಗ್ರಾಮದ ಕಾವೇರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.
- ಹೆಚ್.ಕೆ.ಜಗದೀಶ್.