ಮಡಿಕೇರಿ, ಜೂ. 13: 2018ರ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡ ಹಲವು ಸಂತ್ರಸ್ತರಿಗೆ ಈಗಾಗಲೇ ಮನೆ ವಿತರಿಸಲಾಗಿದೆ. ಕಾಟಕೇರಿ, ಮದೆನಾಡು, ಗಾಳಿಬೀಡು ವಿನಲ್ಲಿ ನಿರ್ಮಾಣವಾದಂತಹ ಮನೆಗಳಿರುವ ಬಡಾವಣೆಗೆ ಹೆಚ್.ಡಿ. ಕುಮಾರಸ್ವಾಮಿ ಬಡಾವಣೆ (ಹೆಚ್.ಡಿ.ಕೆ.ಲೇಔಟ್) ಎಂದು ನಾಮಕರಣ ಮಾಡಬೇಕಾಗಿ ಮಡಿಕೇರಿ ನಗರ ಯುವ ಜನತಾ ದಳದ ಅಧ್ಯಕ್ಷ ರವಿಕಿರಣ್ ಎನ್. ಹಾಗೂ ಪ್ರಧಾನ ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ ಆಗ್ರಹಿಸಿದ್ದಾರೆ.