ನಾಪೆÉÇೀಕ್ಲು, ಜೂ. 13: ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಪಟ್ಟಣದ ನಂದಿನಿ ಆಸ್ಪತ್ರೆಯಲ್ಲಿ ವಿನೂತನ ಮಾದರಿಯ ಡಿಸ್ ಇನ್ಫೆಕ್ಟೆಂಟ್ ಟನಲ್ ಅಳವಡಿಸಲಾಗಿದೆ.
ಆಸ್ವತ್ರೆಗೆ ಆಗಮಿಸುವ ರೋಗಿಗಳು ಒಳ ಬರುವ ಸಂದರ್ಭದಲ್ಲಿ ಅವರಿಗೆ ಡಿಸ್ ಇನ್ಫೆಕ್ಟೆಂಟ್ ಟನಲ್ ಯಂತ್ರದ ಮೂಲಕ ಸ್ಯಾನಿಟೈಸರ್ ಆಮ್ಲವನ್ನು ಸಿಂಪಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಇದು ಕೊಡಗು ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ. ಇದನ್ನು ನಾಪೆÇೀಕ್ಲುವಿನ ವೈದ್ಯ ಡಾ. ವಲ್ಲಂಡ ಚಂಗಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ನಂದಿನಿ ಆಸ್ವತ್ರೆಯು ಕಳೆದ 22 ವರ್ಷಗಳಿಂದ ಗ್ರಾಮೀಣ ಪ್ರದೇಶದ ರೋಗಿಗಳ ಸೇವೆಯನ್ನು ಮಾಡುತ್ತಾ ಬಂದಿದೆ. ಇಂದು ಇಡೀ ವಿಶ್ವ ಮಾರಕ ರೋಗವಾದ ಕೊರೊನಾದಿಂದ ತತ್ತರಿಸಿದೆ. ಇದು ಇತರರಿಗೆ ಹರಡ ದಂತೆ ಇಲ್ಲಿ ವಿನೂತನ ಮಾದರಿಯ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು.
ತಲಕಾವೇರಿ- ಭಾಗಮಂಡಲ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಈ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕಾಫಿ ಬೆಳೆಗಾರ ಕುಲ್ಲೇಟಿರ ಶಂಕರಿ ಚಂಗಪ್ಪ, ಜಿಲ್ಲಾ ಉಪ ಆರೋಗ್ಯಾಧಿಕಾರಿ ಡಾ. ದೇವದಾಸ್, ಶುಶ್ರೂಷಕಿ ಟಿ.ಶ್ರೀಜಾ, ಯಶೋಧ, ಮಂಜು ಮತ್ತಿತರರು ಇದ್ದರು.