ಪೆರಾಜೆ, ಜೂ. 13: ಕೂರ್ನಡ್ಕ-ಪೆರಾಜೆ ಮಾರ್ಗವಾಗಿ ಕೇರಳಕ್ಕೆ ಅಕ್ರಮವಾಗಿ ದನ ಸಾಗಾಟ ದಿನೇ ದಿನೇ ಹೆಚ್ಚಾಗಿ ನಡೆಯುತಿದೆ. ಕೊಡಗಿನ ಪೆರಾಜೆಯಿಂದ ಕೇರಳ ಸಂಪರ್ಕಿಸುವ 3 ರಸ್ತೆಗಳು ಬಂದ್ ಆಗಿದ್ದರೂ, ಇಂದು ಪಂಚಾಯತ್‍ನ ಪರವಾನಗಿ ಇಲ್ಲದೆ ದನಗಳನ್ನು ಸಾಗಿಸುವ ವೇಳೆ ಸ್ಥಳೀಯರು ಪ್ರಶ್ನಿಸಿದಾಗ ಆರೋಪಿ ಗಳು ದನಗಳನ್ನು ಗಾಡಿಯಿಂದ ಇಳಿಸಿ ಕೇರಳಕ್ಕೆ ಪರಾರಿಯಾಗಿದ್ದಾರೆ.
ಸುಳ್ಯದ ಅರಂಬೂರಿನಿಂದ ಕೇರಳಕ್ಕೆ ಕಮ್ಮಾಡಿಯ ಕೆಲವರು ಟಾಟಾ ಎಸಿ ಗಾಡಿಗಳಲ್ಲಿ ಒಂದೇ ದಿನ 8 ದನಗಳನ್ನು ಕೇರಳಕ್ಕೆ ಸಾಗಿಸಿರುವ ಬಗ್ಗೆ ತಿಳಿದು ಬಂದಿದೆ. ಕರ್ನಾಟಕದಿಂದ ಕೇರಳಕ್ಕೆ ಪ್ರವೇಶಕ್ಕೆ ನಿಬರ್ಂಧಗಳಿದ್ದರೂ ಯಾವುದೇ ಪುರಾವೆಗಳಿಲ್ಲದೆ ದಿನನಿತ್ಯ ದನಕರುಗಳನ್ನು ಸಾಗಿಸುತ್ತಿ ದ್ದಾರೆ. ಅಲ್ಲದೆ ಎರಡು ದಿನಗಳ ಹಿಂದೆಯಷ್ಟೆ ಗಡಿಯನ್ನು ಬಂದ್ ಮಾಡುವ ಸಲುವಾಗಿ ಅಳವಡಿಸಿದ ಬ್ಯಾರಿಗೇಡ್‍ಗಳನ್ನು ರಾತ್ರಿ ಯಾರೋ ಕಿಡಿಗೇಡಿಗಳು ತಳ್ಳಿ ಹಾಕಿದ್ದಾರೆ. ನಂತರ ಊರಿನವರು ಸಮ್ಮುಖದಲ್ಲಿ ಈ ಗೇಟ್‍ಗಳನ್ನು ಪುನಃ ಅಳವಡಿಸಲಾ ಯಿತು. ಈ ಅಕ್ರಮ ವಹಿವಾಟುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಕಳ್ಳ ಸಾಗಣೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.