ಗೋಣಿಕೊಪ್ಪಲು, ಜೂ. 13: ದ. ಕೊಡಗಿನ ಹುದಿಕೇರಿ ಗ್ರಾಮದ ತೀತಿರ ಎನ್. ಅಪ್ಪಚ್ಚು ಬೆಂಗಳೂರಿನ ದಕ್ಷಿಣ ವಿಭಾಗದ ಅಡಿಷನಲ್ ಚೀಫ್ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಹುದ್ದೆಗೆ ಬಡ್ತಿ ಹೊಂದಿದ್ದಾರೆ. ನಿವೃತ್ತ ಶಿಕ್ಷಕ ನಂಜಪ್ಪ ಹಾಗೂ ತೀತಿರ ಶಾಂತಿ ದಂಪತಿಗಳ ಪುತ್ರರಾದ ಇವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಹುದಿಕೇರಿ ರಾಮಕೃಷ್ಣ ಆಶ್ರಮ ಶಾಲೆಯಲ್ಲಿ ಪೂರೈಸಿ ಚಿಕ್ಕಮಂಗಳೂರಿನ ಆದಿ ಚುಂಚನಗಿರಿ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದು ಕೆಪಿಎಸ್‍ಸಿ ಪರೀಕ್ಷೆ ಮುಖಾಂತರ ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಆಗಿ ನೇಮಕಗೊಂಡಿದ್ದರು. ಇದೀಗ ಇನ್ಸ್‍ಪೆಕ್ಟರ್ ಹುದ್ದೆಗೇರಿದ ಕೊಡವ ಜನಾಂಗದ ಮೊದಲ ವ್ಯಕ್ತಿಯಾಗಿದ್ದಾರೆ.