ವೀರಾಜಪೇಟೆ, ಜೂ. 13: ಕಳೆದ ತಿಂಗಳ 21ರಂದು ರಾತ್ರಿ ಇಲ್ಲಿನ ಗೋಣಿಕೊಪ್ಪ ರಸ್ತೆಯ ಮಟನ್ ಮಾರ್ಕೆಟ್ ಜಂಕ್ಷನ್‍ನಲ್ಲಿರುವ ಕಾಫಿ ಕರಿಮೆಣಸು ಉದ್ಯಮಿ ಶಬೀರ್ ಎಂಬವರ ಮನೆಗೆ ಕಿಟಕಿಯ ಕಬ್ಬಿಣದ ಗ್ರಿಲ್‍ನ್ನು ಕತ್ತರಿಸಿ ಒಳ ನುಗ್ಗಿ ದರೋಡೆಗೆ ಯತ್ನಿಸಿ ವಿಫಲವಾದ ನಂತರ ಮೊಬೈಲ್‍ನೊಂದಿಗೆ ತಲೆಮರೆಸಿಕೊಂಡಿದ್ದವರ ಸುಳಿವು ಪತ್ತೆಯಾಗಿದ್ದು, ನಗರ ಪೊಲೀಸರು ಮೂವರನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ದರೋಡೆ ಪ್ರಕರಣದಲ್ಲಿ ಸುಮಾರು ಐದು ಮಂದಿ ಭಾಗಿ ಯಾಗಿದ್ದು, ಎಲ್ಲರೂ ಎಮ್ಮೆಮಾಡು ವಿಭಾಗದವರೆಂದು ತನಿಖೆಯಿಂದ ಗೊತ್ತಾಗಿದ್ದು ದರೋಡೆಗೆ ಸಂಬಂಧಿಸಿ ದಂತೆ ನಗರ ಪೊಲೀಸರ ತನಿಖಾ ತಂಡ ದರೋಡೆಯ ಪೂರ್ಣ ಮಾಹಿತಿಯನ್ನು ಕಲೆ ಹಾಕಿದೆ.ಶಬೀರ್ ಅಹಮ್ಮದ್ ಮನೆಯ ದರೋಡೆಯ ಸಂಬಂಧದಲ್ಲಿ ಅವರ ಪತ್ನಿ ಕೈರುನ್ನಿಸಾ ಶಬೀರ್ ಅವರ ಸಹೋದರಿಯ ಮಗ ಮಹಮ್ಮದ್‍ತಾಹ ಸೇರಿದಂತೆ ಮೂರು ಮಂದಿ ದುಷ್ಕರ್ಮಿ ದರೋಡೆ ಕೋರರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು.

ಘಟನೆ ಸಂಭವಿಸಿದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿóಷ್ಠಾಧಿಕಾರಿ ಡಾ. ಸುವiನ್ ಪನ್ನೇಕರ್ ಭೇಟಿ ನೀಡಿ ಪೊಲೀಸ್ ತನಿಖಾ ತಂಡಗಳನ್ನು ರಚಿಸಿ ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚುವಂತೆ ಸಹಾಯಕ ಅಧಿಕಾರಿಗಳಿಗೆ ಆದೇಶಿಸಿದ್ದರು.

ನಗರ ಪೊಲೀಸರ ತನಿಖಾ ತಂಡ ಮೂವರು ದರೋಡೆಕೋರರನ್ನು ವಶಪಡಿಸಿಕೊಂಡ ನಂತರ ದರೋಡೆಗೆ ಯತ್ನಿಸಿದ ಶಬೀರ್ ಅವರ ಅಂಗಡಿ ಮಳಿಗೆಯ ಮೇಲಿರುವ ಮನೆಯನ್ನು ಮಹಜರು ನಡೆಸಿ ಶಬೀರ್ ಅವರ ಹೇಳಿಕೆಯನ್ನು ದಾಖಲಿಸಿರುವುದಾಗಿ ಗೊತ್ತಾಗಿದೆ.