ಮಡಿಕೇರಿ, ಜೂ. 13: ಮೂರು ವರ್ಷದಿಂದ ಮಧುಮೇಹದಿಂದ ಬಳಲುತ್ತಿರುವ ಚುಂಬಿತ್ ಚಂಗಪ್ಪ ಅವರ ಚಿಕಿತ್ಸೆಗೆ ದಾನಿಗಳಿಂದ ರೂ. 57,300 ಸಂಗ್ರಹವಾಗಿದೆ. ಮಡಿಕೇರಿ ಸಂತ ಮೈಕಲರ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿ ಚುಂಬಿತ್ ಚಂಗಪ್ಪನ ಸಂಕಷ್ಟದ ಬಗ್ಗೆ ಮಾಧ್ಯಮ ಸ್ಪಂದನ ತಂಡದ ಅಜ್ಜಮಾಡ ರಮೇಶ್ ಕುಟ್ಟಪ್ಪ ಗಮನಕ್ಕೆ ಬಿಜೆಪಿ ಮಡಿಕೇರಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ತಂದಿದ್ದರು.

ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬದ ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಮಾಧ್ಯಮ ಸ್ಪಂದನದ ಮೂಲಕ ದಾನಿಗಳಿಗೆ ಮನವಿ ಮಾಡಲಾಗಿತ್ತು. ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ ದಾನಿಗಳು ವಿದ್ಯಾರ್ಥಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ್ದಾರೆ. 10ನೇ ತರಗತಿ ವಿದ್ಯಾರ್ಥಿ ಕುಪ್ಪಂಡ ಶಶಾಂಕ್ ಬೋಪಣ್ಣ ರೂ. 2,000 ಜಮಾ ಮಾಡುವುದರ ಮೂಲಕ ತನ್ನ ಸಾಮಾಜಿಕ ಕಳಕಳಿ ಪ್ರದರ್ಶಿಸಿದ್ದಾರೆ. ಹೆಸರು ಬಹಿರಂಗ ಪಡಿಸಲು ಇಚ್ಛಿಸದ ದಾನಿಯೊಬ್ಬರು ರೂ 10 ಸಾವಿರ ಜಮಾ ಮಾಡಿದ್ದಾರೆ. ನಾಪೆÇೀಕ್ಲುವಿನ ಕೆ.ಹರೀಶ್ ರೂ. 6,000, ಬಾಳಲೆಯ ಅನಿಲ್ ಉತ್ತಪ್ಪ ರೂ 4,000, ಮಡಿಕೇರಿಯ ಗ್ರೀನ್ ಲ್ಯಾಂಡ್ ಶರೀನ್ ರೂ. 3,000 ಜಮಾ ಮಾಡಿದ್ದಾರೆ.

ಬೊಮ್ಮಂಡ ಚಕ್ರವರ್ತಿ ಪೆÇನ್ನಣ್ಣ, ಚೋಕಂಡ ಶ್ಯಾಮ್ ಬೋಪಣ್ಣ, ಮಾಚಿಮಂಡ ಬಿಪಿನ್ ಬಿದ್ದಪ್ಪ, ಚೋಕಂಡ ಸಂಜು ಸುಬ್ಬಯ್ಯ, ಕದ್ದಣಿಯಂಡ ಗಿರೀಶ್ ಅವರನ್ನೊಳಗೊಂಡ ಅಮ್ಮತ್ತಿಯ ಟೀಮ್ ಮ್ಯಾನೇಜರ್ಸ್ ಸಂಸ್ಥೆಯಿಂದ ರೂ. 10 ಸಾವಿರ ದೇಣಿಗೆ ನೀಡಲಾಗಿದೆ. ಉದಿಯಂಡ ರೋಷನ್ ಸೋಮಣ್ಣ ಮುಂದಾಳತ್ವದ ಬೆಂಗಳೂರಿನ ಕೊಡವಾಮೆ ಸಂಘಟನೆ ಉಚಿತವಾಗಿ ಔಷಧಿ ಒದಗಿಸಲು ಕಾರ್ಯೋನ್ಮುಖವಾಗಿದೆ. ಮಡಿಕೇರಿಯ ಮಕ್ಕಳ ತಜ್ಞ ವೈದ್ಯ ಡಾ.ಬಿ.ಸಿ. ನವೀನ್ ಕುಮಾರ್ ಖುದ್ದು ಮನೆಗೆ ತೆರಳಿ, ವಿದ್ಯಾರ್ಥಿ ಆರೋಗ್ಯ ತಪಾಸಣೆ ಮಾಡಿದರು. ಡಾ.ಮಾತಂಡ ಅಯ್ಯಪ್ಪ ದೂರವಾಣಿ ಮೂಲಕ ಸೂಕ್ತ ವೈದ್ಯಕೀಯ ಮಾರ್ಗದರ್ಶನ ಮಾಡಿದ್ದಾರೆ. ಮಾಧ್ಯಮ ಸ್ಪಂದನ ತಂಡದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಪ್ಪಂಡ ದತ್ತಾತ್ರಿ , ಡಿ.ನಾಗೇಶ್, ನವೀನ್ ಸುವರ್ಣ, ಕುಡೆಕಲ್ ಸಂತೋಷ್ ವಿದ್ಯಾರ್ಥಿಗೆ ನೆರವು ನೀಡಲು ದಾನಿಗಳ ಗಮನ ಸೆಳೆದಿದ್ದರು.