ವೀರಾಜಪೇಟೆ, ಜೂ. 13: ಹಿರಿಯ ನಾಗರಿಕ ವೇದಿಕೆ ವತಿಯಿಂದ ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ, ಮಾಧ್ಯಮ ಪ್ರತಿನಿಧಿಗಳು, ಸ್ವಯಂಸೇವಕರುಗಳ ಕಾರ್ಯ ಕ್ಷಮತೆಯನ್ನು ಗುರುತಿಸಿ ಜುಲ್ಯೆ 2 ರಂದು ವೀರಾಜಪೇಟೆ ಮಹಿಳಾ ಸಮಾಜದ ಕಟ್ಟಡದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಸತ್ಕಾರ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಮಲ್ಲೇಂಗಡ ಶಂಕರಿ ಪೊನ್ನಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಕಾರ್ಯದರ್ಶಿ ಪುಲಿಯಂಡ ಪೊನ್ನಪ್ಪ, ನಿರ್ದೇಶಕ ಖಲಿಮುಲ್ಲಾಖಾನ್, ಕಾನೂನು ಸಲಹೆಗಾರ ಪುಚ್ಚಿಮಂಡ ಕಾವೇರಿ, ಕಚೇರಿ ಕಾರ್ಯದರ್ಶಿ ಕುಪ್ಪಂಡ ಟೈನಿ ಬೋಪಣ್ಣ ಉಪಸ್ಥಿತರಿದ್ದರು.