ಸುಂಟಿಕೊಪ್ಪ, ಜೂ. 13: ಕುಶಾಲನಗರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ತಿರುಗಾಡುತ್ತಿದ್ದ ಅಂಧ ವ್ಯಕ್ತಿಯನ್ನು ಸಾರ್ವಜನಿಕರು ಪೊಲೀಸ್ ಠಾಣೆಗೆ ಒಪ್ಪಿಸಿ ನಂತರ ಸುಂಟಿಕೊಪ್ಪ ವಿಕಾಸ ಜನಸೇವಾ ಟ್ರಸ್ಟ್ ಆಶ್ರಮದಲ್ಲಿ ಆಶ್ರಯ ನೀಡಲಾಯಿತು. ಅಂಧ ವೆಂಕಟೇಶ್ (42) ಸುಂಟಿಕೊಪ್ಪ ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

ಕಳೆದ ಕೆಲವು ದಿನಗಳಿಂದ ಕುಶಾಲನಗರ ಬಸ್ ನಿಲ್ದಾಣದಲ್ಲಿ ಅಂಧ ವ್ಯಕ್ತಿ ತಿರುಗಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಆತನ ಪೂರ್ವಪರ ವಿಚಾರಿಸಲಾಗಿ ತಾನು ಅನಾಥನೆಂದು ತಿಳಿಸಿದ ಮೇರೆಗೆ ಆತನನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದರು. ಆತನ ಮಾಹಿತಿ ಪಡೆದ ಪೊಲೀಸರು ಸುಂಟಿಕೊಪ್ಪ ವಿಕಾಸ ಜನಾಸೇವಾ ಅನಾಥಾಶ್ರಮದ ಅಧ್ಯಕ್ಷ ರಮೇಶ್ ಅವರಿಗೆ ಮಾಹಿತಿ ನೀಡಿದರು. ಅದರಂತೆ ಅವರು ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಝಾಯ್ಧ್ ಆಹಮ್ಮದ್ ಅವರೊಂದಿಗೆ ಆಗಮಿಸಿ ವೆಂಕಟೇಶ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಆಶ್ರಮದಲ್ಲಿ ಊಟೋಪಚಾರ ನೀಡಿ ಆಶ್ರಯ ನೀಡಿದರು. ಕುಶಾಲನಗರ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.