ಮಡಿಕೇರಿ, ಜೂ. 13: ಕೊಡಗು ಜಿಲ್ಲೆಯ ಹಿರಿಯ ನಿವೃತ್ತ ಸೇನಾನಿಗಳಲ್ಲಿ ಒಬ್ಬರಾಗಿದ್ದ ಲೆಫ್ಟಿನೆಂಟ್ ಜನರಲ್ ಕೋದಂಡ ಎನ್. ಸೋಮಣ್ಣ (93) ಅವರು ತಾ. 13 ರಂದು ವೀರಾಜಪೇಟೆಯ ಅವರ ನಿವಾಸದಲ್ಲಿ ವಿಧಿವಶರಾದರು.ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಬಳಿಕ ಕೊಡಗಿನಿಂದ ಅಪ್ಪಾರಂಡ ಅಯ್ಯಪ್ಪ ಅವರು ಮೂರನೇ ವ್ಯಕ್ತಿಯಾಗಿ ಲೆ.ಜ. ಪದವಿಗೆ ಏರಿದ್ದರೆ (ಬಿ.ಇ.ಎಲ್. ಸಂಸ್ಥೆಯ ನಿರ್ದೇಶಕರಾಗಿದ್ದರು) ಇವರ ನಂತರ ಕೋದಂಡ ಸೋಮಣ್ಣ ಅವರು ಈ ಪದವಿ ಯನ್ನು ಅಲಂಕರಿಸಿದವ ರಾಗಿದ್ದರು. ಗೂರ್ಖಾ ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸಿದ ಇವರು ಭಾರತೀಯ ಸೇನೆಯಲ್ಲಿ ಡೆಪ್ಯುಟಿ ಚೀಫ್ ಆಗಿದ್ದಾಗ ಇವರ ಮುಂದಾಳತ್ವದಲ್ಲಿ ಆಪರೇಶನ್ ಬ್ಲೂಸ್ಟಾರ್ ಕಾರ್ಯಾ ಚರಣೆ ನಡೆದಿತ್ತು. ಈ ಕಾರ್ಯಾ ಚರಣೆ ಯಿಂದಾಗಿ ಸೋಮಣ್ಣ ಅವರು ಹೆಸರುವಾಸಿಯಾಗಿದ್ದರು. ಹಾಗಾಗಿ ಅವರು ನಿವೃತ್ತರಾದ ಬಳಿಕವೂ ಅವರಿಗೆ ಜೀವ ಬೆದರಿಕೆ ಇತ್ತು. ಆ ಸಂದರ್ಭದಲ್ಲಿ ಅವರಿಗೆ ಪೊಲೀಸ್ ರಕ್ಷಣೆ ಕೂಡ ಒದಗಿಸಲಾಗಿತ್ತು.