ಮಡಿಕೇರಿ, ಜೂ. 13: ಮಡಿಕೇರಿಯ ಕಾಫಿ ಕೃಪಾ ಕಟ್ಟಡದಲ್ಲಿ ಇದ್ದಂತಹ ಕೊಡಗು ಜಿಲ್ಲಾ ಅಬ್ಕಾರಿ ಇಲಾಖೆಯ ಕಚೇರಿಯನ್ನು ಇಲ್ಲಿನ ಓಂಕಾರೇಶ್ವರ ದೇವಾಲಯದ ಬಳಿ ಖಾಸಗಿ ಕಟ್ಟಡಕ್ಕೆ ಸ್ಥಳಾಂತಗೊಳಿಸಲಾಗಿದೆ.ಗಾಂಧಿ ಮೈದಾನಕ್ಕೆ ಹೊಂದಿಕೊಂಡಿರುವ ಕಟ್ಟಡದಲ್ಲಿದ್ದ ಕಚೇರಿಯನ್ನು ಮಳೆಗಾಲದ ಸೋರುವಿಕೆ ನಡುವೆ ಕಡತಗಳ ಸುರಕ್ಷತೆ ಸಲುವಾಗಿ ಬದಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಅಬ್ಕಾರಿ ಉಪ ಆಯುಕ್ತೆ ಬಿಂಧುಶ್ರೀ ಅವರು ಅಭಿಪ್ರಾಯ ನೀಡಿದ್ದಾರೆ.ಕಳೆದ 10 ವರ್ಷಗಳಿಂದ ಅಬ್ಕಾರಿ ಇಲಾಖೆಯ ನೂತನ ಕಟ್ಟಡವನ್ನು ಸ್ವಂತ ನೆಲೆಯಲ್ಲಿ ನಿರ್ಮಿಸಲು ರೂ. 5 ಕೋಟಿಯ ಯೋಜನೆ ಕೈಗೊಂಡಿದ್ದು, ಸರಕಾರದಿಂದ ಕೊರೊನಾ ನಡುವೆ ಅನುದಾನ ಲಭಿಸಿಲ್ಲ.