ಕೂಡಿಗೆ, ಜೂ.11: ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ಎಲ್ಲಾ ಇಲಾಖೆಯವರು ಒಟ್ಟುಗೂಡಿ ಪರಿಸ್ಥಿತಿಯನ್ನು ನಿಭಾಯಿಸಲು ಅನುಸರಿಸಲು ಬೇಕಾಗುವ ಪೂರ್ವ ಸಿದ್ಧತೆಯ ಅಭ್ಯಾಸವು ಐದು ಇಲಾಖೆಯ ತಂಡಗಳು ಒಳಗೊಂಡಂತೆ ಜಂಟಿಯಾಗಿ ಪೂರ್ವ ಸಿದ್ಧತೆಯ ಅಭ್ಯಾಸ ಹಾರಂಗಿಯ ಹಿನ್ನೀರಿನಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಪಿ. ಸುಮನ್, ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಚಂದನ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮತ್ತು ಎನ್‍ಡಿಆರ್‍ಎಫ್ ತಂಡದವರು ಸೇರಿದಂತೆ ವಿವಿಧ ಇಲಾಖೆಯವರು ಜಂಟಿಯಾಗಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಮಸ್ಯೆಗೆ ಸಿಲುಕಿದವರನ್ನು ರಕ್ಷಣೆ ಮಾಡುವ ಪೂರ್ವ ಸಿದ್ಧತೆ ಅಭ್ಯಾಸ ಮಾಡಿದರು.

ಮೊದಲು ನೀರಿಗೆ ಸಿಲುಕಿದವರನ್ನು ರಕ್ಷಣೆ ಮಾಡಲು ನೀರಿನಲ್ಲಿ ದೋಣಿ ಸಾಗಿಸುವ ಬಗ್ಗೆ, ಮಳೆಯ ಸಂದರ್ಭದಲ್ಲಿ ಮಣ್ಣಿನಡಿ ಸಿಲುಕಿದರೆ ಅವರನ್ನು ಮೊದಲು ರಕ್ಷಣೆ ಮಾಡಲು ಅನುಸರಿಸುವ ವಿಧಾನಗಳನ್ನು ಅಭ್ಯಾಸ ಮಾಡಿದರು. ನೀರಿನಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ಅವರಿಗೆ ಜೀವ ರಕ್ಷಣಾ ವಸ್ತು (ಕವಚ) ಬಳಸುವ ಬಗ್ಗೆ ಮಾಹಿತಿ ಸೇರಿದಂತೆ ಎಲ್ಲಾ ಇಲಾಖೆಯ 100ಕ್ಕೂ ಅಧಿಕ ಮಂದಿ ಒಟ್ಟಿಗೆ ಸೇರಿ ಕೈಗೊಂಡರು.