ಮಡಿಕೇರಿ, ಜೂ. 10: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಗೋಣಿಕೊಪ್ಪಲು ಪೆÇಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಕೆಲ ಪೆÇಲೀಸ್ ಅಧಿಕಾರಿಗಳ ವಿರುದ್ಧ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಅವರ ನೇತೃತ್ವದ ನಿಯೋಗ ಬುಧವಾರ ದಂದು ಮಡಿಕೇರಿಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದೆ.

ಕೆ.ಎಂ. ಅಬ್ದುಲ್ ರಹಿಮಾನ್ ಅವರನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪೆÇಲೀಸರ ಪೂರ್ವನಿಯೋಜಿತವಾದ ಷಡ್ಯಂತ್ರದ ಫಲವಾಗಿ ಬಾಪು ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿಸಿರುವುದು ಪೆÇಲೀಸ್ ದೌರ್ಜನ್ಯ ಎಂದು ಮಡಿಕೇರಿ, ಜೂ. 10: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಗೋಣಿಕೊಪ್ಪಲು ಪೆÇಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಕೆಲ ಪೆÇಲೀಸ್ ಅಧಿಕಾರಿಗಳ ವಿರುದ್ಧ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಅವರ ನೇತೃತ್ವದ ನಿಯೋಗ ಬುಧವಾರ ದಂದು ಮಡಿಕೇರಿಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದೆ.

ಕೆ.ಎಂ. ಅಬ್ದುಲ್ ರಹಿಮಾನ್ ಅವರನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪೆÇಲೀಸರ ಪೂರ್ವನಿಯೋಜಿತವಾದ ಷಡ್ಯಂತ್ರದ ಫಲವಾಗಿ ಬಾಪು ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿಸಿರುವುದು ಪೆÇಲೀಸ್ ದೌರ್ಜನ್ಯ ಎಂದು ಮಹಮ್ಮದ್ ರಾಫಿ, ಉಸ್ಮಾನ್ ಜೆ.ಕೆ. ಸೋಮಣ್ಣ, ಆಲೀರ ರಶೀದ್, ವಕೀಲ ಸಮೀರ್, ಕೋಳುಮಂಡ ರಫೀಕ್, ಅಬ್ದುಲ್ ಅಜೀಜ್ ನಾಪೆÇೀಕ್ಲು, ಖಲೀಲ್ ಬಾಷಾ, ಅಬ್ದುಲ್ ರಜಾಕ್ ಮೊದಲಾದವರಿದ್ದರು.

ಸುಳ್ಳು ಮೊಕದ್ದಮೆ:ಮುಸ್ಲಿಂ ಮುಖಂಡರ ತುರ್ತು ಸಭೆ

ಪೆÇನ್ನಂಪೇಟೆ: ಅಲ್ಪಸಂಖ್ಯಾತ ಮುಖಂಡ ಗೋಣಿಕೊಪ್ಪಲು ಬಳಿಯ ಧನುಗಾಲ ಬೆಮ್ಮತ್ತಿ ಗ್ರಾಮದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು) ಅವರ ವಿರುದ್ಧ ಗೋಣಿಕೊಪ್ಪಲು ಪೆÇಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಾಗಿದೆ. ವೀರಾಜಪೇಟೆ ಡಿವೈಎಸ್ಪಿ, ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕರು ಮತ್ತು ಗೋಣಿಕೊಪ್ಪಲು ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಕೊಡಗು ಮುಸ್ಲಿಂ ಮುಖಂಡರು, ಇದು ಅಲ್ಪಸಂಖ್ಯಾತ ಪ್ರಮುಖರ ಧ್ವನಿ ಅಡಗಿಸುವ ಹುನ್ನಾರದ ಭಾಗವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ.

ಈ ಕುರಿತು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಮುಸ್ಲಿಂ ಮುಖಂಡರು ತುರ್ತುಸಭೆ ನಡೆಸಿ ಅಬ್ದುಲ್ ರಹಿಮಾನ್ ಅವರ ವಿರುದ್ಧ ದಾಖಲಾದ ಸುಳ್ಳು ಪ್ರಕರಣ ಮತ್ತು ಅದರ ಹಿನ್ನೆಲೆಯ ಪರಿಸ್ಥಿತಿಗಳನ್ನು ಅವಲೋಕಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಪೆÇಲೀಸ್ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರ, ದೀನದಲಿತರ ಮತ್ತು ಶೋಷಿತರ ಪರವಾಗಿ ಅನ್ಯಾಯದ ವಿರುದ್ಧ ಧ್ವನಿಯೆತ್ತುತ್ತಿದ್ದ ರಹಿಮಾನ್ ಅವರು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿದವರಲ್ಲ. ಕೆಲ ಪೆÇಲೀಸ್ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಧ್ವನಿಯೆತ್ತಿದ್ದ ಅವರು ಸಾಮಾಜಿಕ ನ್ಯಾಯ ಪಡೆಯುವ ಹಿನ್ನೆಲೆಯಲ್ಲಿ ಹಿಂದೆ ಕೆಲ ಹೋರಾಟವನ್ನು ಮಾಡಿದ್ದರು. ಇದು ತಾಲೂಕಿನ ಕೆಲ ಪೆÇಲೀಸ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿ ಯಾಯಿತು. ಇದಕ್ಕಾಗಿ ಸೇಡು ತೀರಿಸಿಕೊಳ್ಳಲು ಈ ರೀತಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಹಿರಿಯ ಮುಸ್ಲಿಂ ಮುಖಂಡ, ಕೊಡಗು ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಿ.ಎಂ. ಖಾಸಿಂ ಹೇಳಿದರು.

ಜೂ.6 ರಂದು ಧನುಗಾಲ ಬೆಮ್ಮತಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಹಲ್ಲೆ ಪ್ರಕರಣದಲ್ಲಿ ರಹಿಮಾನ್ ಭಾಗಿಯಾಗಿಲ್ಲ. ಅದು ಅವರ ಸಂಬಂಧಿಕರ ನಡುವೆ ನಡೆದ ಹಲ್ಲೆಯಾಗಿತ್ತು. ಅವರ ಗ್ರಾಮದಲ್ಲಿ ಹಲ್ಲೆ ನಡೆದರೆ ಅದಕ್ಕೆ ಅವರನ್ನು ಹೊಣೆಯಾಗಿಸುವುದು ಎಷ್ಟು ಸರಿ? ಎಂದು ಖಾಸಿಂ ಪ್ರಶ್ನಿಸಿದ್ದಾರೆ.

ಗೋಷ್ಠಿಯಲ್ಲಿ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ವಿವಿಧೆಡೆಯ ಮುಸ್ಲಿಂ ಮುಖಂಡರುಗಳಾದ ನಾಪೆÇೀಕ್ಲಿನ ಮನ್ಸೂರ್ ಅಲಿ, ಕೊಟ್ಟಮುಡಿಯ ಹೆಚ್.ಎ. ಹಂಸ, ನಲ್ವತ್ತೋಕ್ಲಿನ ಪಿ.ಎಂ. ಹನೀಫ್, ವಿರಾಜಪೇಟೆಯ ಮೊಹಮ್ಮದ್ ರಾಫಿ, ಪೆÇನ್ನಂಪೇಟೆಯ ಆಲೀರ ರಶೀದ್ ಮತ್ತು ವೀರಾಜಪೇಟೆಯ ಏಜಾಜ್ ಅಹಮದ್ ಅವರು ಇದ್ದರು.