ಪಶು ವೈದ್ಯಕೀಯ ಆಸ್ಪತ್ರೆ: ಪಶು ವೈದ್ಯಕೀಯ ಆಸ್ಪತ್ರೆ, ವೀರಾಜಪೇಟೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.ಶಾಂತಳ್ಳಿ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸೋಮವಾರಪೇಟೆಯ ಶಾಂತಳ್ಳಿ ಉಪವಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಂತಳ್ಳಿ ಇವರ ಸಹಯೋಗದೊಂದಿಗೆ ಆರೋಗ್ಯ ಕೇಂದ್ರದ ಆವರಣದಲ್ಲಿ ಗಿಡ ನೆಡುವ ಮುಖಾಂತರ ಪರಿಸರ ದಿನವನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಶಾಂತಳ್ಳಿ ಉಪವಲಯದ ಉಪವಲಯ ಅರಣ್ಯಾಧಿಕಾರಿ ಹೆಚ್.ಎಂ. ರಾಕೇಶ್, ಅರಣ್ಯ ರಕ್ಷಕರಾದ ಕಿರಣ್ ಬಿ.ಎನ್., ಅರಣ್ಯ ಇಲಾಖಾ ಸಿಬ್ಬಂದಿಗಳು ಮತ್ತು ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.ವೀರಾಜಪೇಟೆ: ವೀರಾಜಪೇಟೆ ತಾಲೂಕು ಕೆದಮಳ್ಳೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆದಮಳ್ಳೂರು, ಕಿರಿಯ ಪ್ರಾಥಮಿಕ ಶಾಲೆ ಕೊಟ್ಟೋಳಿ ಮತ್ತು ಪಂಚಾಯಿತಿ ವ್ಯಾಪ್ತಿಯ ಆಶ್ರಯ ಕಾಲೋನಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಗಳ ಆವರಣದಲ್ಲಿ ವಿವಿಧ ಜಾತಿಯ ಹಣ್ಣುಗಳು ಮತ್ತು ಕಾಡು ಜಾತಿಯ ಸಸಿಗಳನ್ನು ನೆಡಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳು, ಕಾಲೋನಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸಿಬ್ಬಂದಿಗಳು 100 ವಿವಿಧ ಜಾತಿಯ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು. ಈ ಸಂದರ್ಭ ಕೆದಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಆರ್. ರೋಹಿಣಿ, ಪಿ.ಡಿ.ಓ. ಪ್ರಮೋದ್ ಕುಮಾರ್, ಉಪಾಧ್ಯಕ್ಷೆ ಬಿ.ಜೆ. ಅನಿತಾ, ಸದಸ್ಯರಾದ ಬಿ.ಹೆಚ್. ಕಿರಣ್ ಕುಮಾರ್, ಎಂ.ಎಂ. ಇಸ್ಮಾಯಿಲ್ ಮತ್ತು ಪಂಚಾಯಿತಿ ಕಾರ್ಯದರ್ಶಿ ವಿಠಲ ಹಾಗೂ ಸಿಬ್ಬಂದಿಗಳು ಹಾಜರಿದ್ದರು.ವೀರಾಜಪೇಟೆ: ವೀರಾಜಪೇಟೆ ತಾಲೂಕು ಕೆದಮಳ್ಳೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆದಮಳ್ಳೂರು, ಕಿರಿಯ ಪ್ರಾಥಮಿಕ ಶಾಲೆ ಕೊಟ್ಟೋಳಿ ಮತ್ತು ಪಂಚಾಯಿತಿ ವ್ಯಾಪ್ತಿಯ ಆಶ್ರಯ ಕಾಲೋನಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಗಳ ಆವರಣದಲ್ಲಿ ವಿವಿಧ ಜಾತಿಯ ಹಣ್ಣುಗಳು ಮತ್ತು ಕಾಡು ಜಾತಿಯ ಸಸಿಗಳನ್ನು ನೆಡಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳು, ಕಾಲೋನಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸಿಬ್ಬಂದಿಗಳು 100 ವಿವಿಧ ಜಾತಿಯ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು. ಈ ಸಂದರ್ಭ ಕೆದಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಆರ್. ರೋಹಿಣಿ, ಪಿ.ಡಿ.ಓ. ಪ್ರಮೋದ್ ಕುಮಾರ್, ಉಪಾಧ್ಯಕ್ಷೆ ಬಿ.ಜೆ. ಅನಿತಾ, ಸದಸ್ಯರಾದ ಬಿ.ಹೆಚ್. ಕಿರಣ್ ಕುಮಾರ್, ಎಂ.ಎಂ. ಇಸ್ಮಾಯಿಲ್ ಮತ್ತು ಪಂಚಾಯಿತಿ ಕಾರ್ಯದರ್ಶಿ ವಿಠಲ ಹಾಗೂ ಸಿಬ್ಬಂದಿಗಳು ಹಾಜರಿದ್ದರು.ಶನಿವಾರಸಂತೆ: ಇಲ್ಲಿನ ಭಾರತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಬಿ. ನಾಗಪ್ಪ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ.ಆರ್. ನಿರಂಜನ್, ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ, ಲಯನ್ಸ್ ಉಪಾಧ್ಯಕ್ಷ ಬಿ.ಸಿ. ಧರ್ಮಪ್ಪ, ಎನ್.ಕೆ. ಅಪ್ಪಸ್ವಾಮಿ, ಸದಸ್ಯರುಗಳಾದ ಸಿ.ಪಿ. ಹರೀಶ್, ಕಾರ್ಯಪ್ಪ, ಪುಟ್ಟಪ್ಪ, ನರೇಶ್‍ಚಂದ್ರ, ಭಾರತೀ ವಿದ್ಯಾಸಂಸ್ಥೆಯ ನಿರ್ದೇಶಕರುಗಳಾದ ಎ.ಎಂ. ಆನಂದ, ಜಗನ್‍ಪಾಲ್, ಪ್ರಿನ್ಸಿಪಾಲ್ ಅಶೋಕ್, ಕಾಲೇಜಿನ ಪ್ರಾಂಶುಪಾಲ ದಯಾನಂದ, ಮುಖ್ಯೋಪಾಧ್ಯಾಯ ನರಸಿಂಹಮೂರ್ತಿ, ಶರಣ್ ಉಪಸ್ಥಿತರಿದ್ದರು. ಬಿ.ಕೆ. ಚಿಣ್ಣಪ್ಪ ಸ್ವಾಗತಿಸಿ, ಜಗನ್‍ಪಾಲ್ ನಿರೂಪಿಸಿ, ದಯಾನಂದ ವಂದಿಸಿದರು. ಭಾಗಮಂಡಲ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಲಕಾವೇರಿ ಸಮೀಪದ ಅರಣ್ಯಪ್ರದೇಶದಲ್ಲಿ ಸಸಿನೆಡುವ ಕಾರ್ಯಕ್ರಮಕ್ಕೆ ವಲಯ ಅರಣ್ಯಾಧಿಕಾರಿ ದೇವರಾಜ್ ಹೆಚ್.ಜಿ. ಹಾಗೂ ತಲಕಾವೇರಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಚಾಲನೆ ನೀಡಿದರು. ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣಾಚಾರ್ ಹಾಗೂ ಭಾಗಮಂಡಲ ಪಿಡಿಒ ಅಶೋಕ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಭಾಗಮಂಡಲದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕುಶಾಲನಗರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರದ ವಿವಿಧೆಡೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರ ಜೆಎಂಎಫ್‍ಸಿ ನ್ಯಾಯಾಲಯ ಆವರಣದಲ್ಲಿ ನ್ಯಾಯಾಲಯದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಸಂದೀಪ್ ರೆಡ್ಡಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಹೆಚ್ಚು ಹೆಚ್ಚು ಪರಿಸರಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ವಾತಾವರಣ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್, ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಕುಶಾಲನಗರದ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ, ಉಪಾಧ್ಯಕ್ಷ ಕೆ.ಎಸ್. ವೆಂಕಟರಮಣ ಮತ್ತು ನ್ಯಾಯಾಲಯ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು.ಮಡಿಕೇರಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ವಿನೂತನವಾಗಿ ‘ಗ್‍ಡ ನೆಡಿ ಪಟ ಎಡಿ’ ಅಭಿಯಾನವನ್ನು ನಡೆಸಲಾಯಿತು. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಹೂಟಗಳ್ಳಿಯ ಪಾರ್ಕ್‍ನಲ್ಲಿ ವಿವಿಧ ಜಾತಿಯ ಹಲವು ಜಾತಿಯ ಗಿಡಗಳನ್ನು ನೆಡುವುದರ ಮೂಲಕ, ಹಿರಿಯ ಸದಸ್ಯರಾದ ಪಾಂಡಂಡ ಮೇದಪ್ಪ, ಪಟ್ಟಡ ಜಯಕುಮಾರ್ ಹಾಗೂ ಆಪಾಡಂಡ ಜಗ ಮೊಣ್ಣಪ್ಪ ಅವರು ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವಾಮೆರ ಕೊಂಡಾಟ ಕೂಟದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ವಹಿಸಿಕೊಂಡು ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯು ವಾರ್ಷಿಕ ಹಬ್ಬವಾಗಿ ಆಚರಣೆಯಾಗುವಂತಾವುದರ ಮೂಲಕ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ನಮ್ಮ ಪ್ರಕೃತಿಯ ಬಳುವಳಿಯಾಗಿರುವ ಪರಿಸರವರನ್ನು ಕಾಪಾಡಿ ಯತಾಪ್ರಕಾರ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಕೂರ್ಗಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು ಭಾಗವಹಿಸಿದ್ದರು. ಹಲವಾರು ಗಿಡಮರಗಳನ್ನು ನೆಡುವುದರ ಮೂಲಕ, ಪರಿಸರ ಸಂರಕ್ಷಣೆಯಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ ಪರಿಸರ ರತ್ನ ಸುರೇಶ್ ಅವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆದಿಯಲ್ಲಿ ಸದಸ್ಯ ಕೂತಂಡ ಮೊಣ್ಣಪ್ಪ, ಅವರು ಪ್ರಾರ್ಥಿಸಿ, ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ ಸ್ವಾಗತಿಸಿ, ಸದಸ್ಯೆ ಕುಲ್ಲಚಂಡ ವಿನುತ ಕೇಸರಿ ಅವರು ನಿರೂಪಿಸಿ ಸದಸ್ಯ ಚೆರಿಯಪಂಡ ವಿಶು ಕಾಳಪ್ಪ ವಂದಿಸಿದರು. ಸಹಕಾರ್ಯದರ್ಶಿ ಚಾಮೆರ ಪ್ರಿಯಾ ದಿನೇಶ್, ಸದಸ್ಯರಾದ ಕುಲ್ಲಚಂಡ ಸಹನ ದೇಚಮ್ಮ ಕುಂಡ್ಯೋಳಂಡ ಉತ್ತಪ್ಪ, ಮಂಡೋಟಿರ ಕವಿನ್, ಮುಕ್ಕಾಟಿರ ಹರ್ಷಿತ, ಪಾಂಡಂಡ ಲವಲಿ ಮೇದಪ್ಪ, ಕುಲ್ಲಚಿರ ಸುಮಿ ದಿನೇಶ್, ಚಮ್ಮಟಿರ ಪ್ರವೀಣ್ ಉತ್ತಪ್ಪ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು. ಪೆÇನ್ನಂಪೇಟೆ: ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಿಬ್ಬಂದಿಗಳು ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು. ಪ್ರಾಂಶುಪಾಲ ಪೆÇ್ರ. ಕೆ.ವಿ. ಕುಸುಮಾಧರ್ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ದಿನದಂದು ಗಿಡ ನೆಟ್ಟರೆ ಸಾಲದು, ನೆಟ್ಟ ಗಿಡಕ್ಕೆ ನೀರುಣಿಸಿ ಆರೈಕೆ ಮಾಡಿ ಅದು ದೊಡ್ಡ ಮರವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. ಸ್ವಚ್ಛ ಪರಿಸರ ಇದ್ದರೆ ಮಾತ್ರ ಜೀವ ಸಂಕುಲ ಆರೋಗ್ಯವಾಗಿ ಇರಲು ಸಾಧ್ಯ ಎಂದರು.

ಈ ಸಂದರ್ಭ ಪ್ರಾದ್ಯಾಪಕರುಗಳಾದ ಡಾ. ಎಂ.ಪಿ. ರೇಖಾ, ಪೆÇ್ರ. ಎಂ.ಎಸ್. ಭಾರತಿ, ಪೆÇ್ರ. ಎಂ.ಬಿ. ಕಾವೇರಪ್ಪ, ಅಧೀಕ್ಷಕ ಸೋಮನಾಥ್, ಉಪನ್ಯಾಸಕರಾದ ಎನ್.ಪಿ. ರೀತಾ, ಕೆ.ಕೆ. ಚಿತ್ರಾವತಿ, ಗ್ರಂಥಪಾಲಕಿ ಟಿ.ಕೆ. ಲತಾ, ಆಲ್ವಿನ್ ಸಿಕ್ವೇರಾ ಇನ್ನಿತರರು ಇದ್ದರು.ಸೋಮವಾರಪೇಟೆ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಎಂ.ಜೆ. ಅಣ್ಣಮ್ಮ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಪರಿಸರಕ್ಕೂ ಮನುಷ್ಯನ ಜೀವನಕ್ಕೂ ಅವಿನಾಭಾವ ಸಂಬಂಧ ಇದ್ದು, ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಸಹ ಶಿಕ್ಷಕರಾದ ಪಿ.ಎಸ್. ಶಾರದ, ಎಸ್.ಎಸ್. ಶಾಂತ. ಕೆ.ಟಿ. ಚಂದ್ರಕಲಾ, ಎನ್.ಎಂ. ನಾಗೇಶ್, ಎಂ. ಆಶಾಲತ, ಹೆಚ್.ಎಸ್. ಲತಾ, ಪಿ. ಪ್ರೇಮ, ಸಿ.ಪಿ. ಮೀನಾಕ್ಷಿ ಇದ್ದರು.ಸೋಮವಾರಪೇಟೆ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಎಂ.ಜೆ. ಅಣ್ಣಮ್ಮ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಪರಿಸರಕ್ಕೂ ಮನುಷ್ಯನ ಜೀವನಕ್ಕೂ ಅವಿನಾಭಾವ ಸಂಬಂಧ ಇದ್ದು, ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಸಹ ಶಿಕ್ಷಕರಾದ ಪಿ.ಎಸ್. ಶಾರದ, ಎಸ್.ಎಸ್. ಶಾಂತ. ಕೆ.ಟಿ. ಚಂದ್ರಕಲಾ, ಎನ್.ಎಂ. ನಾಗೇಶ್, ಎಂ. ಆಶಾಲತ, ಹೆಚ್.ಎಸ್. ಲತಾ, ಪಿ. ಪ್ರೇಮ, ಸಿ.ಪಿ. ಮೀನಾಕ್ಷಿ ಇದ್ದರು.ಕೊಡ್ಲಿಪೇಟೆ: ಕೊಡ್ಲಿಪೇಟೆಯ ಎಸ್.ಕೆ.ಎಸ್.ಎಸ್.ಎಫ್. ಶಾಖಾ ವತಿಯಿಂದ ಪರಿಸರ ದಿನದ ಪ್ರಯುಕ್ತ ಹ್ಯಾಂಡ್‍ಪೋಸ್ಟ್‍ನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಖತೀಬ್ ಹಾರಿಸ್ ಬಾಖವಿ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್.ಕೆ.ಎಸ್.ಎಸ್.ಎಫ್. ಶಾಖಾ ಅಧ್ಯಕ್ಷ ಕೆ.ಎ. ಇಬ್ರಾಹಿಂ ಅಧ್ಯಕ್ಷತೆ ವಹಿಸಿ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿದರು. ಜಮಾಅತ್ ಅಧ್ಯಕ್ಷ ಡಿ.ಎ. ಸುಲೈಮಾನ್, ಶಾಖಾ ಜಿಲ್ಲಾ ಘಟಕದ ಖಜಾಂಚಿ ಸಿದ್ದೀಕ್ ಹಾಜಿ, ಕಾರ್ಯದರ್ಶಿ ಝಹೀರ್ ನಿಝಾಮಿ, ವಿಖಾಯ ಕನ್ವಿನರ್ ಬಾಸಿತ್ ಹಾಜಿ, ರಾಜ್ಯ ಕ್ಯಾಂಪಸ್ ವಿಂಗ್ ಅಧ್ಯಕ್ಷ ಇಬ್ರಾಹಿಂ ಬಾತಿಷಾ ಶಂಸಿ, ಶಾಖಾ ಹಾಗೂ ವಿಖಾಯ ಸದಸ್ಯರು ಹಾಜರಿದ್ದರು.ಸಿದ್ದಾಪುರ: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಅಭ್ಯತ್ ಮಂಗಲದಲ್ಲಿ ಮರುಜೀವ ಪಡೆದ ಅತ್ತಿಮಂಗಲ ಕೆರೆ ಸಮೀಪ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕೆರೆಯ ನಿರ್ವಹಣೆಯ ಉಸ್ತುವಾರಿ ವಹಿಸಿ ಕೊಂಡಿರುವ ನೆಲ್ಲಿಹುದಿಕೇರಿಯ ಮುತ್ತಪ್ಪ ಕಲಾ ಯುವ ವೇದಿಕೆ ವತಿಯಿಂದ ನಡೆದ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಸ್ಥಳೀಯ ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವರ್ಷಕ್ಕೆ ಒಂದು ಬಾರಿ ಮಾತ್ರ ಹಸಿರ ಪರಿಸರದ ಬಗ್ಗೆ ಕಾಳಜಿ ತೋರದೆ ಪ್ರತಿದಿನ ಪರಿಸರವನ್ನು ಉಳಿಸಿ ಬೆಳೆಸುವ ಪಣತೊಡ ಬೇಕೆಂದರು. ಮರಗಳನ್ನು ಬೆಳೆಸುವುದರಿಂದ ಮಾತ್ರ ಸಕಾಲದಲ್ಲಿ ಮಳೆ, ಬೆಳೆಯಾಗಲು ಸಾಧ್ಯ ಮತ್ತು ಪರಿಸರದ ಸಮತೋಲನ ಕಾಯ್ದುಕೊಳ್ಳ ಬಹುದೆಂದರು. ಯುವ ವೇದಿಕೆಯ ಅಧ್ಯಕ್ಷ ಅಭಿಲಾಷ್, ಉಪಾಧ್ಯಕ್ಷ ಅಪ್ಪಿ, ಕಾರ್ಯದರ್ಶಿ ಸಚಿನ್, ಸದಸ್ಯರುಗಳಾದ ವಿನೋದ್, ಪದ್ಮನಾಭ, ಜಯ ಕುಮಾರ್, ಸಿಂಗೀತ್, ಚರಣ್, ಗ್ರಾ.ಪಂ ಸದಸ್ಯರುಗಳಾದ ದಿನೇಶ್, ಬಿ.ಕೆ. ಯಶೋಧ, ನಳಿನಿ, ಜಮೀಲ, ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಜ್ಯೋತಿ ನಗರ ಭಾರತಾಂಬೆ ಕಲಾ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ರತೀಶ್, ದರ್ಶನ್, ಮುರುಳಿ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭ ಕೆರೆಯನ್ನು ಸ್ವಚ್ಛಗೊಳಿಸಿದ ನೆಲ್ಲಿಹುದಿಕೇರಿಯ ಮುತ್ತಪ್ಪ ಕಲಾ ಯುವ ವೇದಿಕೆಯ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಕೆರೆಯ ಆಸುಪಾಸಿನಲ್ಲಿ ಗಿಡಗಳನ್ನು ನೆಡಲಾಯಿತು.ಸೋಮವಾರಪೇಟೆ : ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಸಹಯೋಗದಲ್ಲಿ ಸೋಮವಾರಪೇಟೆ ತಾಲೂಕು ಸಾಮಾಜಿಕ ಅರಣ್ಯ ವಲಯದ ವತಿಯಿಂದ ಬೇಳೂರು ಹಾಗೂ ಹಾನಗಲ್ಲು ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಜೀವ ವೈವಿಧ್ಯ ದಿನವನ್ನು ಆಚರಿಸಲಾಯಿತು.

ಬೇಳೂರು ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಡನೆಟ್ಟು ಜೀವ ವೈವಿಧ್ಯ ಸಂರಕ್ಷಣೆ ಕುರಿತು ಮಾಹಿತಿಯನ್ನು ಕಾರ್ಯಕ್ರಮದ ಸಂಯೋಜಕ ಕಿಶನ್ ನೀಡಿದರು. ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದ ಆರ್.ಎಫ್.ಓ. ನಮನ ನಾರಾಯಣ ನಾಯ್ಕ್ ಮಾತನಾಡಿದರು. ಗ್ರಾಮ ಪಂಚಾಯ್ತಿ ಸದಸ್ಯ ಕೆ.ಎ. ಯಾಕೂಬ್ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹೆಚ್.ಎಂ. ಚನ್ನಕೇಶವಸ್ವಾಮಿ, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಾನಗಲ್ಲು ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್ ಮತ್ತು ಸದಸ್ಯರು, ಬೇಳೂರು ಗ್ರಾ.ಪಂ. ಉಪಾಧ್ಯಕ್ಷ ಬಿ.ಬಿ. ಸಂತೋಷ್ ಕುಮಾರ್, ಸದಸ್ಯರಾದ ಎ.ಹೆಚ್. ಯೋಗೇಂದ್ರ, ಕೆ.ಪಿ. ಹರೀಶ್, ಕೆ.ಇ. ಆನಂದ, ರಾಜು, ಮಂಜುಳಾ, ಕವಿತ, ಸುಜಾತ, ಆರ್. ವೀಣಾ ಇತರರು ಇದ್ದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಆವರಣ ಮತ್ತು ಸುತ್ತಮುತ್ತಲಿನ ಸ್ಥಳದಲ್ಲಿ ನೇರಳೆ, ಸಂಪಿಗೆ, ಗೇರು, ಸೀಬೆ ಮತ್ತಿತರ ಸಸಿಗಳನ್ನು ನೆಡಲಾಯಿತು.*ಸಿದ್ದಾಪುರ: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವತಿಯಿಂದ ವಾಲ್ನೂರು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸುವ ಪಣ ತೊಡಲಾಯಿತು. ಪಂಚಾಯಿತಿ ಸದಸ್ಯರುಗಳಾದ ಸಲೀಂ, ನಳಿನಿ, ಜಮೀಲ, ಕಮಲಮ್ಮ, ಭುವನೇಂದ್ರ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.ಕುಶಾಲನಗರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರ ಸಮೀಪದ ಬೈಲುಕೊಪ್ಪ ಪೊಲೀಸ್ ಠಾಣಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಠಾಣಾಧಿಕಾರಿ ಸವಿ ಅವರು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಠಾಣೆಯ ಸಿಬ್ಬಂದಿಗಳು ಇದ್ದರು.