ಸೋಮವಾರಪೇಟೆ, ಜೂ. 9: ಇಲ್ಲಿನ ರೋಟರಿ ಸಂಸ್ಥೆಯ ವತಿಯಿಂದ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ, ರೋಗಿಗಳ ತುರ್ತು ಚಿಕಿತ್ಸೆಗೆ ಅಗತ್ಯವಾದ ನೆಬ್ಯುಲೈಸರ್‍ನ್ನು ಕೊಡುಗೆಯಾಗಿ ನೀಡಲಾಯಿತು.

ರೋಟರಿ ಅಧ್ಯಕ್ಷ ಡಿ.ಪಿ. ರಮೇಶ್, ಮಾಜಿ ಅಧ್ಯಕ್ಷ ಕೆ.ಡಿ.ಬಿದ್ದಪ್ಪ ಅವರುಗಳ ಮೂಲಕ ವೈದ್ಯಾಧಿಕಾರಿ ಶಿವಪ್ರಸಾದ್ ಹಾಗೂ ಶುಶ್ರೂಷಕಿಯರು ಆಸ್ಪತ್ರೆಯ ಪರವಾಗಿ ನೆಬ್ಯುಲೈಸರ್‍ನ್ನು ಸ್ವೀಕರಿಸಿದರು.