ನಾಪೆÇೀಕ್ಲು, ಜೂ. 9 : ಬೇತು ಗ್ರಾಮದಲ್ಲಿ ನೂತನವಾಗಿ ಮಹಿಳಾ ಸಮಾಜವು ಅಸ್ತಿತ್ವಕ್ಕೆ ಬಂದಿದೆ. ಈ ವಿಭಾಗದ ಮಹಿಳೆಯರು ಎಲ್ಲರೂ ಒಟ್ಟಾಗಿ ಸಭೆ ಸೇರಿ ಗ್ರಾಮದಲ್ಲಿ ಮಹಿಳೆಯರಿಗೆ ಯಾವುದೇ ಸಂಘ ಇಲ್ಲದಿರುವುದನ್ನು ಮನಗಂಡು ಮಹಿಳಾ ಸಮಾಜವನ್ನು ಸ್ಥಾಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಸಮಾಜಕ್ಕೆ ನೂತನ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಸಮಾಜದ ಅಧ್ಯಕ್ಷರಾಗಿ ಚೋಕಿರ ಶೈಲಾ ಪೂವಪ್ಪ, ಉಪಾಧ್ಯಕ್ಷರಾಗಿ ಕೊಂಡೀರ ಶಾಂತಿ ಮಾದಪ್ಪ, ಪ್ರಧಾನ ಕಾರ್ಯದರ್ಶಿ ಯಾಗಿ ಬೊಳ್ಳೇಪಂಡ ಶೈಲಾ ಉತ್ತಪ್ಪ, ಜಂಟಿ ಕಾರ್ಯದರ್ಶಿಯಾಗಿ ಚೋಕಿರ ಹೇಮಾವತಿ ಅಪ್ಪಯ್ಯ ಅವರನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರುಗಳಾಗಿ ಎಳ್ತಂಡ ಶಾಂತಿ, ಕಾಳೇಯಂಡ ಮುತ್ತವ್ವ, ಅಪ್ಪೇರಿಯಂಡ ಗೌರಮ್ಮ, ಕೀಕಂಡ ಸುಶೀಲಾ, ಬೊಳ್ಳೆಪಂಡ ಗೀತಾ, ಬೊಳ್ಳೇಪಂಡ ಸುನೀತಾ, ಕುಟ್ಟಂಜೆಟ್ಟೀರ ಬಿನಿತ, ಕೊಂಡೀರ ದಮಯಂತಿ, ಕಲ್ಯಾಟಂಡ ಮೇರಿ ಮತ್ತು ಚೋಕಿರ ರಾಣಿ ಇವರುಗಳನ್ನು ಆಯ್ಕೆ ಮಾಡಲಾಯಿತು.