ಮಡಿಕೇರಿ, ಜೂ. 9: ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‍ಗಳನ್ನು ಶ್ರೀಮಂಗಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್‍ನಿಂದ ಗೌರವಿಸುವ ದರೊಂದಿಗೆ ಅವರಿಗೆ ಮುಖಗವಸು ಹಾಗೂ ಸ್ಯಾನಿಟೈಸರ್ ವಿತರಿಸ ಲಾಯಿತು.

ಆರಕ್ಷಕ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಇವರುಗಳಿಗೆ ಮುಖಗವಸು, ಸ್ಯಾನಿಟೈಸರ್ ನೀಡುವ ದರೊಂದಿಗೆ ಹತ್ತು ವರ್ಷದೊಳಗಿನ ಮಕ್ಕಳ ಉಪಯೋಗಕ್ಕಾಗಿಯೂ ಹೆಚ್ಚುವರಿಯಾಗಿ ಇದನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಒದಗಿಸಲಾಯಿತು. ಪೊಮ್ಮಮ್ಮಕ ಪರಿಷತ್‍ನ ಅಧ್ಯಕ್ಷೆ ಕಟ್ಟೇರ ಪಿ. ಸುಶೀಲಾ, ಉಪಾಧ್ಯಕ್ಷೆ ಬೊಜ್ಜಂಗಡ ಶೈಲಾ, ಪದಾಧಿಕಾರಿ ಗಳಾದ ಕಾಳಿಮಾಡ ಸೀಮಾ, ಚೋನಿರ ಪವೀನ್, ಮಚ್ಚಮಾಡ ರೇಷ್ಮ ಮತ್ತಿತರ ಸದಸ್ಯರು ಈ ಸಂದರ್ಭ ಪಾಲ್ಗೊಂಡಿದ್ದರು.