ಕೂಡಿಗೆ, ಜೂ. 7: ಕೊಡಗಿನ ಗಡಿ ಶಿರಂಗಾಲ ಗ್ರಾಮದಲ್ಲಿ 1981 ರಲ್ಲಿ ಪ್ರಾರಂಭಗೊಂಡ ಜಿಲ್ಲೆಯ ಏಕೈಕ ಕಾವೇರಿ ಸಮೂಹ ನೇಯ್ಗೆ ಕೇಂದ್ರ ಅಭಿವೃದ್ಧಿ ಕಾಣದೆ ಮೂಲೆ ಗುಂಪಾಗಿದೆ. ಈ ನೇಯ್ಗೆ ಆರಂಭದಲ್ಲಿ ಕೇಂದ್ರ ಶಿರಂಗಾಲದ ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿತ್ತು. ಇದೀಗ 15 ಜನ ಮಾತ್ರ ಕೆಲಸ ಮಾಡುವ ಪ್ರಸಂಗಗಳು ಎದುರಾಗಿವೆ. ಇದಕ್ಕೆಲ್ಲಾ ಆಧುನಿಕವಾದ ಹೊಸ ತಂತ್ರಜ್ಞಾನದ ವಿದ್ಯುತ್ ನೇಯ್ಗೆ ಮಗ್ಗಗಳನ್ನು ಅಳವಡಿಸದೆ ಇರುವುದು ಕಾರಣ ಎಂಬ ಆರೋಪ ಕೇಳಿಬರುತ್ತಿದೆ.ಅಧಿಕಾರಿಗಳು ಸಮಗ್ರವಾಗಿ ಈ ಕೇಂದ್ರದಲ್ಲಿ ನೇಯ್ಗೆ ಮಾಡಲು ಬೇಕಾಗುವ ಕಚ್ಚಾವಸ್ತುಗಳನ್ನು ನೀಡುತ್ತಿದ್ದಾರೆ. ಸಿದ್ಧವಾದ ಬೆಡ್‍ಶೀಟ್ ಮತ್ತು ಟವಲ್‍ಗಳನ್ನು ಸಮಯಕ್ಕೆ ಸರಿಯಾಗಿ ಮಾರುಕಟ್ಟೆ ಮೂಲಕ ಇಲಾಖೆ ಸಾಗಾಟ ಮಾಡಿದರೂ ಸರಿಯಾದ ಬೆಲೆಯಿಲ್ಲದೆ , ಕೈಮಗ್ಗದಲ್ಲಿ ನೇಯ್ಗೆ ಮಾಡುವ ನೇಕಾರರಿಗೆ ಕೆಲಸಕ್ಕೆ ತಕ್ಕಂತೆ ಹಣ ದೊರಕುತ್ತಿಲ್ಲ ಎಂದು ನೇಯ್ಗೆ ಯಲ್ಲಿ ತೊಡಗಿರುವ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈಗಾಗಲೇ ಬೀಳುವ ಹಂತ ತಲಪಿರುವ ಕಟ್ಟಡ ಮತ್ತು ಟವಲ್‍ಗಳನ್ನು ಸಮಯಕ್ಕೆ ಸರಿಯಾಗಿ ಮಾರುಕಟ್ಟೆ ಮೂಲಕ ಇಲಾಖೆ ಸಾಗಾಟ ಮಾಡಿದರೂ ಸರಿಯಾದ ಬೆಲೆಯಿಲ್ಲದೆ , ಕೈಮಗ್ಗದಲ್ಲಿ ನೇಯ್ಗೆ ಮಾಡುವ ನೇಕಾರರಿಗೆ ಕೆಲಸಕ್ಕೆ ತಕ್ಕಂತೆ ಹಣ ದೊರಕುತ್ತಿಲ್ಲ ಎಂದು ನೇಯ್ಗೆ ಯಲ್ಲಿ ತೊಡಗಿರುವ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈಗಾಗಲೇ ಬೀಳುವ ಹಂತ ತಲಪಿರುವ ಕಟ್ಟಡ ನೂರಾರು ಜನರಿದ್ದು, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ನೇಯ್ಗೆ ಕೇಂದ್ರ ಅನುಕೂಲವಾಗಿತ್ತು. ಆದರೆ ಇದೀಗ ಈ ಬಟ್ಟೆ ಉತ್ಪಾದನಾ ಕೇಂದ್ರ ದಿನಕಳೆದಂತೆ ಮೂಲೆ ಗುಂಪಾಗಿ ಶಿಥಿಲಾವಸ್ಥೆ ತಲುಪಿ ಬೀಳುವ ಹಂತಕ್ಕೆ ತಲುಪಿದೆ.

ಜಿಲ್ಲೆಯಲ್ಲೇ ಏಕೈಕ ಕೇಂದ್ರವಾಗಿರುವ ಈ ನೇಯ್ಗೆ ಕೇಂದ್ರವು ಉಪ ಶಾಖೆಗಳನ್ನು ಹೊಂದಿತ್ತು. ಮಡಿಕೇರಿ ಮತ್ತು ಕುಶಾಲನಗರದಲ್ಲಿ ಖಾದಿ ವಸ್ತು ಮಾರಾಟ ಹೊಂದಿತ್ತು. ಆದರೆ ಇದೀಗ ಎರಡೂ ಕೇಂದ್ರಗಳನ್ನು ಮುಚ್ಚಲಾಗಿದೆ.

ಗ್ರಾಮಾಂತರ ಪ್ರದೇಶದ ಕಾರ್ಮಿಕರಿಗೆ ಅನುಕೂಲವಾಗಿದ್ದ ಈ ನೇಯ್ಗೆ ಕೇಂದ್ರವನ್ನು ಪುನಶ್ಚೇತನ ಗೊಳಿಸಲು ಪ್ರಮುಖವಾಗಿ

(ಮೊದಲ ಪುಟದಿಂದ) ಇಲಾಖೆಯ ಅಧಿಕಾರಿಗಳು ನೇಕಾರರಿಗೆ ಹೆಚ್ಚು ಸಂಬಳವನ್ನು ಸಮರ್ಪಕವಾಗಿ ನೀಡಿದಲ್ಲಿ ಈ ವಿಭಾಗದ ಹೆಚ್ಚು ಖಾದಿ ವಸ್ತುಗಳಾದ ಬೆಡ್‍ಶೀಟ್ ಟವಲ್ ಹಾಗೂ ಖಾದಿಗೆ ಸಂಬಂಧಿಸಿದ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ರಾಜ್ಯದ ಮೂಲೆ ಮೂಲೆಗೆ ಸಾಗಿಸಲು ಅನುಕೂಲವಾಗುವುದು ಎಂದು ಅಲ್ಲಿನ ನೇಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ 25 ವರ್ಷಗಳಿಂದ ನೇಕಾರರಾಗಿ ದುಡಿಯುತ್ತಿರುವ ಅನೇಕ ಕಾರ್ಮಿಕರು ಪತ್ರಿಕೆ ಯೊಂದಿಗೆ ಮಾತನಾಡಿ, ಈ ನೇಯ್ಗೆ ಘಟಕ ಸದೃಢವಾದ ಕಟ್ಟಡವನ್ನು ಹೊಂದಿಲ್ಲ. ಈ ಕಟ್ಟಡವನ್ನು ಆಧುನೀಕರಣಗೊಳಿಸಿ ಹೊಸ ವಿದ್ಯುತ್ ಕೈಮಗ್ಗ ಉಪಕರಣಗಳನ್ನು ಅಳವಡಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಲಾಖೆಯು ಇಲ್ಲಿನ ವ್ಯವಸ್ಥೆಯನ್ನು ಸರಿದೂಗಿಸಲು ಹೋದಲ್ಲಿ ಈ ಘಟಕ ಅಭಿವೃದ್ಧಿ ಯತ್ತ ಸಾಗಲು ಯಾವುದೇ ಅಡ್ಡಿ ಇರುವುದಿಲ್ಲ. ಅಲ್ಲದೆ ಈಗಾಗಲೇ ನೇಕಾರಿಕೆ ತರಬೇತಿ ಪಡೆದಿರುವ 15 ಮಂದಿಯೊಂದಿಗೆ ತಮ್ಮ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳಲು ಬ್ಯಾಂಕುಗಳ ಮೂಲಕ ವಿಶೇಷ ಸಾಲ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಅವರಿಗೆ ನೀಡಬೇಕಾದ ಸಬ್ಸಿಡಿ ಹಣ ಆರು ವರ್ಷ ಕಳೆದರೂ ಇದುವರೆಗೂ ಬಿಡುಗಡೆ ಅಗಿಲ್ಲ. ಬ್ಯಾಂಕ್‍ಗಳಿಗೆ ಬರುವ ಅಧಿಕಾರಿಗಳು ತಮ್ಮ ಹಣವನ್ನು ಕಟ್ಟುವಂತೆ ತಿಳಿಸಿದ್ದಾರೆ ಆಗಿನ ಬ್ಯಾಂಕ್ ಅಧಿಕಾರಿಗಳು ಸಾಲವನ್ನು ನೇಯ್ಗೆ ಯೋಜನೆಯ ಅಡಿಯಲ್ಲಿ ನೀಡುವ ಬದಲು ವ್ಯಾಪಾರ ವ್ಯವಸ್ಥೆಗೆ ನೀಡಿರುತ್ತಾರೆ. ಇದರಿಂದಾಗಿ ಸಬ್ಸಿಡಿ ವಂಚಿತರಾದೆವು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಶಿರಂಗಾಲ ವ್ಯಾಪ್ತಿಯ ನೇಯ್ಗೆಕಾರರಿಗೆ ಉತ್ತಮ ಬದುಕು ರೂಪಿಸಿಕೊಡಬೇಕಿದೆ. ಇದರ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತ ಖುದ್ದಾಗಿ ಪರಿಶೀಲನೆ ಮಾಡಿ ಅಭಿವೃದ್ಧಿ ಪಡಿಸಬೇಕೆಂದು ಜಿಲ್ಲಾ ನೇಕಾರ ಸಮುದಾಯ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರಂಗ ಆಗ್ರಹಿಸಿದ್ದಾರೆ. ಈ ಘಟಕಕ್ಕೆ ಸಂಬಂಧಿಸಿದಂತೆ ರಾಜ್ಯ ಕೈಮಗ್ಗ ಇಲಾಖೆಯ ಆಯುಕ್ತ ಎನ್.ಆರ್. ರವಿ ಹಾಗೂ ಪ್ರಧಾನ ವ್ಯವಸ್ಥಾಪಕ ಮುದ್ದಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿ ಗುರುಸ್ವಾಮಿ ನವರು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ತೆರಳಿದ್ದಾರೆ ಎಂದು ಕೇಂದ್ರದ ಅಧಿಕಾರಿ ತಿಳಿಸಿದ್ದಾರೆ. ಈ ಕೇಂದ್ರದ ಅಭಿವೃದ್ಧಿಗೆ 20 ಲಕ್ಷ ರೂ. ಗಳ ವೆಚ್ಚದ ಕಾಮಗಾರಿಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಭೂ ಸೇನಾ ನಿಗಮದ ವತಿಯಿಂದ ಸರ್ವೆ ನಡೆದಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ಶಿರಂಗಾಲ ಘಟಕ ಅಧಿಕಾರಿ ಮೋಹನ್ ತಿಳಿಸಿದ್ದಾರೆ. - ಕೆ.ಕೆ ನಾಗರಾಜಶೆಟ್ಟಿ