ಮಡಿಕೇರಿ, ಜೂ. 7: ಸರ್ಕಾರದ ಆದೇಶದಂತೆ ತಾ. 8 ರಿಂದ (ಇಂದಿನಿಂದ) ಕಾರ್ಯಾರಂಭಗೊಳ್ಳುವ ಹೊಟೇಲ್, ರೆಸ್ಟೋರೆಂಟ್ ಮತ್ತು ಆತಿಥ್ಯ ಕೇಂದ್ರಗಳಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನದ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾರ್ಗಸೂಚಿ ಪ್ರಕಟಿಸಿದ್ದಾರೆ.* ಕಂಟೈನ್‍ಮೆಂಟ್ ವಲಯಗಳಲ್ಲಿ ತೆರೆಯಲು ಅವಕಾಶವಿಲ್ಲ ಮತ್ತು ಕಂಟೈನ್‍ಮೆಂಟ್ ವಲಯದವರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. * ಜಿಲ್ಲೆಯಲ್ಲಿ ಹಲವು ಹೋಂ-ಸ್ಟೇಗಳು ಇದ್ದು, ಇವುಗಳ ಪೈಕಿ ಪ್ರವಾಸೋದ್ಯಮ ಇಲಾಖೆಯಡಿ ನೋಂದಾಯಿಸಲ್ಪಟ್ಟ ಅನುಮತಿ / ಪರವಾನಗಿ ಪತ್ರ ಹೊಂದಿರುವ ಹೋಂ-ಸ್ಟೇಗಳು ಮಾತ್ರ ಕಾರ್ಯಾಚರಿಸಲು ಅವಕಾಶವಿರುತ್ತದೆ. ಉಲ್ಲಂಘನೆಯಾದಲ್ಲಿ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.* ಸರ್ಕಾರದ ಇತ್ತೀಚಿನ ಆದೇಶದಂತೆ ವಿದೇಶದಿಂದ ಆಗಮಿಸಿದವರಿಗೆ 28 ದಿನಗಳ ಮತ್ತು ಹೊರ ರಾಜ್ಯದಿಂದ ಆಗಮಿಸಿದವರಿಗೆ 21 ದಿನಗಳ ಸಾಂಸ್ಥಿಕ / ಗೃಹ ಸಂಪರ್ಕ ತಡೆ ಕಡ್ಡಾಯವಾಗಿರುತ್ತದೆ. ಆದ್ದರಿಂದ ಕ್ವಾರೆಂಟೈನ್ ಅವಧಿ ಪೂರ್ಣಗೊಳ್ಳುವವರೆಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.

* ಆಗಮಿತರು ಕ್ವಾರೆಂಟೈನ್ ಅವಧಿಯಲ್ಲಿರುವ ಬಗ್ಗೆ ಕೈಗೆ ಮೊಹರು ಹಚ್ಚಿದ್ದಲ್ಲಿ, ಅವರಿಗೆ ಕಡ್ಡಾಯವಾಗಿ ಪ್ರವೇಶ ನಿಬರ್ಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸುವುದು ಮತ್ತು ಖಚಿತಪಡಿಸಿಕೊಳ್ಳುವುದು.

* ತುರ್ತು / ಅನಿವಾರ್ಯ / ವೈದ್ಯಕೀಯ ಹಿನ್ನೆಲೆ ಇದ್ದಲ್ಲಿ ಮಾತ್ರ 65 ವರ್ಷ ಮೇಲ್ಪಟ್ಟವರು, ಸಹ ಅಸ್ವಸ್ತತೆ ಉಳ್ಳವರು, ಗರ್ಭಿಣಿ ಮಹಿಳೆಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವಕಾಶವಿರುತ್ತದೆ. ಈ ರೀತಿಯಾಗಿ ಆಗಮಿಸಿದಲ್ಲಿ ಅವರುಗಳ ಬಗ್ಗೆ ಹೆಚ್ಚಿನ ನಿಗಾವಹಿಸುವುದು.

* ಆಗಮನ ಮತ್ತು ನಿರ್ಗಮನ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಇರಿಸಬೇಕು ಮತ್ತು ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕು.

(ಮೊದಲ ಪುಟದಿಂದ)

* ಆರೋಗ್ಯವಂತ ವ್ಯಕ್ತಿಗಳಿಗೆ ಮಾತ್ರ ಪ್ರವೇಶ.

* ಕಡ್ಡಾಯವಾಗಿ ಮಾಸ್ಕ್ ಅಥವಾ ಮುಖಗವಸು ಧರಿಸತಕ್ಕದ್ದು.

* ಸಾಕಷ್ಟು ಸಾಮಾಜಿಕ ಅಂತರವಿರುವಂತೆ ಆಸನ ವ್ಯವಸ್ಥೆ ಮಾಡುವುದು.

* ಮರು ಬಳಕೆ ಮಾಡಲಾರದಂತಹ ಮೆನು ಕಾರ್ಡ್‍ಗಳನ್ನು ಬಳಸುವುದು.

* ಬಟ್ಟೆಯಿಂದ ತಯಾರಿಸಿದ ನ್ಯಾಪ್ಕಿನ್ ಬದಲಿಗೆ ಉತ್ತಮ ಗುಣಮಟ್ಟದ ಪೇಪರ್ ನ್ಯಾಪ್ಕಿನ್ ಬಳಸುವುದು.

* ಸಾಧ್ಯವಾದಷÀ್ಟು ಪಾರ್ಸೆಲ್ / ರೂಂ ಸರ್ವಿಸ್ / ಹೋಂ ಡೆಲಿವರಿಗೆ ಉತ್ತೇಜನ ನೀಡುವುದು.

* ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಟ 6 ಅಡಿಗಳ ಅಂತರ ಕಾಯ್ದುಕೊಳ್ಳಬೇಕು.

* ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

* ಕೋವಿಡ್-19 ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆಡಿಯೋ / ವೀಡಿಯೋ ಮುದ್ರಿಕೆಗಳ ಮೂಲಕ ಆಗಾಗ್ಗೆ ಜಾಗೃತಿ ಮೂಡಿಸುತ್ತಿರಬೇಕು ಮತ್ತು ಭಿತ್ತಿ ಪತ್ರ / ಪೆÇೀಸ್ಟರ್ ಹಚ್ಚಬೇಕು.

* ಒಳಾಂಗಣ, ಹೊರಾಂಗಣ ಮತ್ತು ಪಾಕಿರ್ಂಗ್ ಸ್ಥಳಗಳಲ್ಲಿ ಹೆಚ್ಚಿನ ಜನ ಒಗ್ಗೂಡದಂತೆ / ಜನ ದಟ್ಟಣೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.

* ಅತಿಥಿಗಳ, ಸಿಬ್ಬಂದಿಗಳ ಮತ್ತು ಸಾಮಗ್ರಿ ದಾಸ್ತಾನು ಸಂಬಂಧ ಪ್ರತ್ಯೇಕ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ/ವ್ಯವಸ್ಥೆ ಕೈಗೊಳ್ಳುವುದು.

* ಅತಿಥಿಗಳ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಸಂಚಾರದ ಹಿನ್ನೆಲೆ, ಆರೋಗ್ಯ ಸ್ಥಿತಿ ಮುಂತಾದ ವಿವರಗಳೊಂದಿಗೆ ಸ್ವಯಂ ಘೋಷÀಣೆ ನಮೂನೆಯನ್ನು ರಿಸೆಪ್ಷನ್ ನಲ್ಲಿ ಭರ್ತಿಗೊಳಿಸಿ ಇರಿಸಿಕೊಳ್ಳುವುದು.

* ಅತಿಥಿಗಳ ಉಪಯೋಗಕ್ಕೆ ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ರಿಸೆಪ್ಷನ್‍ನಲ್ಲಿ ಇರಿಸುವುದು. ನಮೂನೆ ಭರ್ತಿಗೊಳಿಸುವ ಮೊದಲು ಸ್ಯಾನಿಟೈಸರ್‍ನಿಂದ ಹಸ್ತವನ್ನು ಸ್ಯಾನಿಟೈಸ್ ಮಾಡುವುದು.

* ಸಾಧ್ಯವಾದಷÀ್ಟು ವಿವಿಧ ಮಾದರಿಯಲ್ಲಿ ಇ-ಪೇಮೆಂಟ್ ಮೂಲಕ ವ್ಯವಹಾರ ನಡೆಸುವುದು.

* ಲಗ್ಗೇಜ್‍ಗಳನ್ನು ಒಳತರುವ ಮೊದಲು ಸೋಂಕು ನಿವಾರಣೆಗೊಳಿಸುವುದು.

* ಅಡುಗೆ ಕೊಠಡಿ, ವಿತರಣೆ ಕೌಂಟರ್, ವಿತರಣೆ ವ್ಯವಸ್ಥೆಯಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವುದು.

* ಅತಿಥಿಗಳ ಮತ್ತು ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಮಾಸ್ಕ್/ಮುಖಗವಸು, ಗ್ಲೌವ್ಸ್ ಇತ್ಯಾದಿಗಳು ಸ್ಥಳದಲ್ಲೇ ದೊರಕುವಂತೆ ಕ್ರಮ ಕೈಗೊಳ್ಳುವುದು.

* ಮಕ್ಕಳ ಆಟಿಕೆ ಮತ್ತು ಆಟದ ಸ್ಥಳಗಳನ್ನು ಬಳಸುವಂತಿಲ್ಲ.

* ನಿಯಮಿತ ಅವಧಿಗೆ ಸರಿಯಾಗಿ ಪರಿಣಾಮಕಾರಿಯಾಗಿ ಅಡುಗೆ ಕೊಠಡಿ, ಹಾಲ್, ಟೇಬಲ್, ಆಸನ, ಕೈ ತೊಳೆಯುವ ಸ್ಥಳ, ಶೌಚಾಲಯ ಇತ್ಯಾದಿಗಳನ್ನು ಶುಚಿಗೊಳಿಸಿ ಸೋಂಕು ನಿವಾರಣೆ ಮಾಡುವುದು.

* ಸಾಮಾನ್ಯವಾಗಿ ಸಂಪರ್ಕಕ್ಕೆ ಬರುವ ಸ್ಥಳಗಳಾದ ಬಾಗಿಲು ಹಿಡಿ, ಲಿಫ್ಟ್‍ನ ಬಟನ್‍ಗಳು, ಹ್ಯಾಂಟ್ ರೈಲ್, ಬೆಂಚ್‍ಗಳು, ವಾಶ್ ರೂಂ ಮುಂತಾದವುಗಳನ್ನು ಆಗಾಗ್ಗೆ ನಿಯಮಿತ ಅವಧಿಗೆ ಸರಿಯಾಗಿ 1% ಸೋಡಿಯಂ ಹೈಪೆÇೀಕ್ಲೋರೈಡ್ ಮಿಶ್ರಣದಿಂದ ಸೋಂಕು ನಿವಾರಣೆಗೊಳಿಸುವುದು.

* ಅತಿಥಿಗಳು ಮತ್ತು ಸಿಬ್ಬಂದಿಗಳು ಬಳಸಿದ ಮಾಸ್ಕ್ / ಮುಖಗವಸು / ಕರವಸ್ತ್ರ ಇತ್ಯಾದಿಗಳಳು ಇದ್ದಲ್ಲಿ ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿಗೊಳಿಸುವುದು.

* ಪ್ರತಿ ಬಾರಿ ಅತಿಥಿಗಳು ನಿರ್ಗಮಿಸಿದ ನಂತರ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವುದು.

* ರೂಂ ಸರ್ವಿಸ್ ನೀಡುವಾಗ ಪದಾರ್ಥಗಳನ್ನು ನೇರವಾಗಿ ಹಸ್ತಾಂತರಿಸದೆ ಕೊಠಡಿ / ಬಾಗಿಲ ಬಳಿ ಇರಿಸುವುದು.

* ಅಸ್ವಸ್ಥತೆ ಇರುವವರು ಕಂಡು ಬಂದಲ್ಲಿ ಅವರನ್ನು ಇತರರಿಂದ ಪ್ರತ್ಯೇಕಿಸಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದು ಮತ್ತು ಸಮೀಪದ ಆಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸುವುದು.

* ಆಗಮಿಸಿದ ವ್ಯಕ್ತಿಗಳಲ್ಲಿ ಕೋವಿಡ್ -19 ಸೋಂಕು ದೃಢಪಟ್ಟಲ್ಲಿ ಸದರಿ ಕಟ್ಟಡದ ಸಿಬ್ಬಂದಿಗಳು ಸೇರಿದಂತೆ ಪೂರ್ಣ ಕಟ್ಟಡವನ್ನು ಕಂಟೈನ್‍ಮೆಂಟ್ ವಲಯವನ್ನಾಗಿಸಲಾಗುವುದು.

* ಯಾವುದೇ ವಿಚಾರಗಳಿದ್ದಲ್ಲಿ ಜಿಲ್ಲಾಡಳಿತ ಕಂಟ್ರೋಲ್ ರೂಂ 1077 ಅಥವಾ ವಾಟ್ಸಪ್ ಸಂಖ್ಯೆ 8550001077ನ್ನು ಸಂಪರ್ಕಿಸುವುದು.

* ಸಾರ್ವಜನಿಕ ಹಿತಾಸಕ್ತಿಯಿಂದ ಹೊರಡಿಸಲಾದ / ಕಾಲ ಕಾಲಕ್ಕೆ ಹೊರಡಿಸಲಾಗುವ ಕಾರ್ಯವಿಧಾನವನ್ನು ಕಡ್ಡಾಯವಾಗಿ ಪಾಲಿಸುವುದು. ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಆಡಳಿತ ಮಂಡಳಿ/ ವ್ಯವಸ್ಥಾಪಕರು /ಮಾಲೀಕರ ಅಥವಾ ಸಂಬಂಧಪಟ್ಟವರ ವಿರುದ್ದ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ ಮತ್ತು ಸಂಬಂಧಿತ ಇತರೆ ಕಾಯ್ದೆಗಳಡಿ ಕಾನೂನು ಕ್ರಮ ಜರುಗಿಸಲಾಗುವುದು.

ಧಾರ್ಮಿಕ ಸ್ಥಳಗಳಲ್ಲಿ ಅನುಸರಿಸಬೇಕಾದ ಕ್ರಮಗಳು

ಸರ್ಕಾರದ ಆದೇಶದಂತೆ ತಾ. 8 ರಿಂದ ಕಾರ್ಯಾರಂಭಗೊಳ್ಳುವ ಪೂಜಾ ಸ್ಥಳಗಳು, ಧಾರ್ಮಿಕ ಸ್ಥಳಗಳಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದ್ದು, ವಿವರ ಈ ಕೆಳಗಿನಂತಿದೆ.

* ಕಂಟೈನ್‍ಮೆಂಟ್ ವಲಯಗಳಲ್ಲಿ ತೆರೆಯಲು ಅವಕಾಶವಿಲ್ಲ ಮತ್ತು ಕಂಟೈನ್‍ಮೆಂಟ್ ವಲಯದವರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.

* ಸರ್ಕಾರದ ಇತ್ತೀಚಿನ ಆದೇಶದಂತೆ ವಿದೇಶ ದಿಂದ ಆಗಮಿಸಿದವರಿಗೆ 28 ದಿನಗಳ ಮತ್ತು ಹೊರ ರಾಜ್ಯದಿಂದ ಆಗಮಿಸಿದವರಿಗೆ 21 ದಿನಗಳ ಸಾಂಸ್ಥಿಕ / ಗೃಹ ಸಂಪರ್ಕ ತಡೆ ಕಡ್ಡಾಯವಾಗಿರು ತ್ತದೆ. ಆದ್ದರಿಂದ ಕ್ವಾರೆಂಟೈನ್ ಅವಧಿ ಪೂರ್ಣ ಗೊಳ್ಳುವವರೆಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.

* ಆಗಮಿತರು ಕ್ವಾರೆಂಟೈನ್ ಅವಧಿಯಲ್ಲಿರುವ ಬಗ್ಗೆ ಕೈಗೆ ಮೊಹರು ಹಚ್ಚಿದ್ದಲ್ಲಿ, ಅವರಿಗೆ ಕಡ್ಡಾಯವಾಗಿ ಪ್ರವೇಶ ನಿಬರ್ಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸುವುದು ಮತ್ತು ಖಚಿತಪಡಿಸಿಕೊಳ್ಳುವುದು.

* 65 ವಷರ್À ಮೇಲ್ಪಟ್ಟವರು, ಸಹ ಅಸ್ವಸ್ತತೆ ಉಳ್ಳವರು, ಗರ್ಭಿಣಿ ಮಹಿಳೆಯರು ಮತ್ತು 10 ವಷರ್Àಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವಕಾಶ ಇಲ್ಲ.

* ಆಗಮನ ಮತ್ತು ನಿರ್ಗಮನ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಇರಿಸಬೇಕು ಮತ್ತು ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕು.

* ಆರೋಗ್ಯವಂತ ವ್ಯಕ್ತಿಗಳಿಗೆ ಮಾತ್ರ ಪ್ರವೇಶ.

* ಕಡ್ಡಾಯವಾಗಿ ಮಾಸ್ಕ್ ಅಥವಾ ಮುಖಗವಸು ಧರಿಸತಕ್ಕದ್ದು.

* ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಟ 6 ಅಡಿಗಳ ಅಂತರ ಕಾಯ್ದುಕೊಳ್ಳಬೇಕು.

* ಅಸ್ವಸ್ಥತೆ ಕಂಡುಬಂದಲ್ಲಿ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸುವುದು.

* ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

* ಕೋವಿಡ್-19 ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆಡಿಯೋ / ವೀಡಿಯೋ ಮುದ್ರಿಕೆಗಳ ಮೂಲಕ ಆಗಾಗ್ಗೆ ಜಾಗೃತಿ ಮೂಡಿಸುತ್ತಿರಬೇಕು ಮತ್ತು ಭಿತ್ತಿ ಪತ್ರ / ಪೆÇೀಸ್ಟರ್ ಹಚ್ಚಬೇಕು.

* ಶೂ, ಚಪ್ಪಲಿಗಳನ್ನು ವಾಹನದಲ್ಲೇ ಬಿಟ್ಟು ಬರಬೇಕು ಅಥವಾ ಚಪ್ಪಲಿ ಬಿಡುವ ಸ್ಥಳದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಪ್ರತ್ಯೇಕ ಸ್ಲಾಟ್‍ಗಳಲ್ಲಿ ಒಟ್ಟಿಗೆ ಇರಿಸಬೇಕು.

* ಆವರಣದ ಒಳಗೆ, ಹೊರಗೆ, ಪಾಕಿರ್ಂಗ್ ಸ್ಥಳದಲ್ಲಿ ಗುಂಪುಗೂಡದಂತೆ ಅಗತ್ಯ ಕ್ರಮಕೈಗೊಳ್ಳುವುದು. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.

* ಆವರಣದಲ್ಲಿ, ಸಾಲು ನಿಲ್ಲುವಲ್ಲಿ, ದರ್ಶನ ಸ್ಥಳಗಳಲ್ಲಿ, ಕುಳಿತುಕೊಳ್ಳುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತುಗಳನ್ನು ಮಾಡುವುದು.

* ವಿಗ್ರಹ, ಮೂರ್ತಿ, ಪವಿತ್ರ ಪುಸ್ತಕ ಮುಂತಾದವುಗಳನ್ನು ಮುಟ್ಟತಕ್ಕದ್ದಲ್ಲ.

* ಅಧಿಕ ಸಂಖ್ಯೆಯಲ್ಲಿ ಒಗ್ಗೂಡುವ / ಗುಂಪುಗೂಡುವ ಮೆರವಣಿಗೆ, ಜಾತ್ರೆ, ಉರೂಸ್ ಮುಂತಾದವುಗಳನ್ನು ಕಡ್ಡಾಯವಾಗಿ ನಿಷೇಧಿಸಿದೆ.

* ಧಾರ್ಮಿಕ ಗೀತೆಗಳನ್ನು / ಆಡಿಯೋವನ್ನು ಪ್ರಸಾರ ಮಾಡಲು ಅವಕಾಶ ನೀಡಲಾಗಿದೆ. ಇದರ ಬದಲು ಯಾವುದೇ ರೀತಿಯಲ್ಲಿ ಗುಂಪಾಗಿ ಧಾರ್ಮಿಕ ಗೀತೆಗಳನ್ನು ಹಾಡಲು ಅಥವಾ ಭಜನೆ, ಕೀರ್ತನೆ ಇತ್ಯಾದಿಗಳನ್ನು ನಡೆಸಲು ಅವಕಾಶ ಇರುವುದಿಲ್ಲ.

* ಪ್ರಾರ್ಥನೆಗೆ ಭಕ್ತರು ಮನೆಯಿಂದಲೇ ಮ್ಯಾಟ್ ತರಬೇಕು.

* ತೀರ್ಥ, ಪ್ರಸಾದ, ಪವಿತ್ರ ತೀರ್ಥ ಪೆÇ್ರೀಕ್ಷಣೆ ಮಾಡುವಂತಿಲ್ಲ.

* ಶುಭಾಶಯ ಕೋರುವುದಿದ್ದಲ್ಲಿ ಭೌತಿಕ ಅಂತರ ಕಾಯ್ದುಕೊಳ್ಳುವುದು.

* ಸಾರ್ವಜನಿಕ ಅನ್ನ ಸಂತರ್ಪಣೆ / ಅನ್ನದಾನ ಇತ್ಯಾದಿಗಳಲ್ಲಿ ಕಡ್ಡಾಯವಾಗಿ ಭೌತಿಕ ಅಂತರ ಕಾಯ್ದುಕೊಳ್ಳುವುದು ಮತ್ತು ವಿತರಣೆ ಮಾಡುವುದು.

* ಶೌಚಾಲಯ, ಕೈಕಾಲು ತೊಳೆಯುವ ಸ್ಥಳಗಳನ್ನು ಪರಿಣಾಮಕಾರಿಯಾಗಿ ಶುಚಿಗೊಳಿಸುವುದು ಮತ್ತು ಸದಾ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವುದು.

* ನೆಲವನ್ನು ಆಗಾಗ್ಗೆ ಶುಚಿಗೊಳಿಸುವುದು ಮತ್ತು ಸ್ಯಾನಿಟೈಸ್ ಮಾಡುವುದು.

* ಬಳಸಿದ ಮಾಸ್ಕ್ / ಮುಖಗವಸು/ಕರವಸ್ತ್ರ ಇತ್ಯಾದಿಗಳನ್ನು ಇದ್ದಲ್ಲಿ ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿಗೊಳಿಸುವುದು.

* ಸಾಧ್ಯವಾದಷÀ್ಟು ಪ್ರತ್ಯೇಕ ಆಗಮನ ಮತ್ತು ನಿರ್ಗಮನ ವ್ಯವಸ್ಥೆ ಕಲ್ಪಿಸುವುದು.

* ನೈಸರ್ಗಿಕ ಗಾಳಿ, ಬೆಳಕು ಉತ್ತಮವಾಗಿ ಸಂಚರಿಸುವಂತಿರಬೇಕು.

* ಅಸ್ವಸ್ಥತೆ ಇರುವವರು ಕಂಡುಬಂದಲ್ಲಿ ಅವರನ್ನು ಇತರರಿಂದ ಪ್ರತ್ಯೇಕಿಸಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದು ಮತ್ತು ಸಮೀಪದ ಆಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸುವುದು.

* ಯಾವುದೇ ವಿಚಾರಗಳಿದ್ದಲ್ಲಿ ಜಿಲ್ಲಾಡಳಿತ ಕಂಟ್ರೋಲ್ ರೂಂ 1077 ಅಥವಾ ವಾಟ್ಸಪ್ ಸಂಖ್ಯೆ 8550001077ನ್ನು ಸಂಪರ್ಕಿಸುವುದು.

* ಸಾರ್ವಜನಿಕ ಹಿತಾಸಕ್ತಿಯಿಂದ ಹೊರಡಿಸಲಾದ / ಕಾಲ ಕಾಲಕ್ಕೆ ಹೊರಡಿಸ ಲಾಗುವ ಕಾರ್ಯವಿಧಾನವನ್ನು ಕಡ್ಡಾಯವಾಗಿ ಪಾಲಿಸುವುದು. ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಆಡಳಿತ ಮಂಡಳಿ/ ಪ್ರಮುಖರ ವಿರುದ್ಧ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಆಕ್ಟ್ ಮತ್ತು ಸಂಬಂಧಿತ ಇತರೆ ಕಾಯ್ದೆಗಳಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.