ಭಾಗಮಂಡಲ, ಜೂ. 7: ಲಾಕ್‍ಡೌನ್ ನಿರ್ಬಂಧಗಳನ್ನು ಸಡಿಲ ಗೊಳಿಸಲಾಗಿದ್ದು, ದೇವಾಲಯಗಳನ್ನು ಸೋಮವಾರದಿಂದ ತೆರೆಯಲು ಸರಕಾರ ಅವಕಾಶ ಕಲ್ಪಿಸಿದ್ದು ಜಿಲ್ಲೆಯ ಪ್ರಮುಖ ಆರಾಧನಾ ತಾಣಗಳಾದ ತಲಕಾವೇರಿ ಹಾಗೂ ಭಾಗಮಂಡಲ ಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಭಾನುವಾರ ಕೈಗೊಳ್ಳಲಾಯಿತು.ದೇವಾಲಯಗಳ ಪ್ರವೇಶಕ್ಕೆ ವಿಧಿಲಾಗಿರುವ ನಿರ್ಬಂಧಗಳನ್ನು ಪಾಲಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಯಿತು. ಭಾಗಮಂುಡಲದ ಭಗಂಡೇಶ್ವರ ದೇವಾಯದಲ್ಲಿ ಹಾಗೂ ತಲಕಾವೇರಿಯಲ್ಲಿ ನಿತ್ಯಪೂಜೆಗಳು ನಡೆಯಲಿವೆ. ಯಾವುದೇ ಪೂಜಾ ಸೇವೆಗಳು ಇರುವುದಿಲ್ಲ.ತ್ರಿವೇಣಿ ಸಂಗಮದಲ್ಲಿ ಪಿಂಡಪ್ರಧಾನ, ಕೇಶಮುಂಡನ ಸೇರಿದಂತೆಯಾವುದೇ ಧಾರ್ಮಿಕ ಪದ್ಧತಿಗಳಿಗೆ ಅವಕಾಶವಿಲ್ಲ. ರಾಜ್ಯ ಮುಜರಾಯಿ ಇಲಾಖೆಯ ನಿರ್ದೇಶನಗಳನ್ನು ತಲಕಾವೇರಿ-ಭಾಗಮಂಡಲದಲ್ಲಿಯೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.

ಎರಡೂವರೆ ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಪೂಜೆ-ಪುನಸ್ಕಾರಗಳು ಆರಂಭಗೊಳ್ಳಲಿದ್ದು ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಮಾಡಲಾಗಿದೆ. ಸ್ಯಾನಿಟೈಸರ್ ಸೇರಿದಂತೆ ವಿವಿಧ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ.