ಮಡಿಕೇರಿ, ಜೂ. 7: ಅರಕಲಗೂಡು ಮಲ್ಲಿಪಟ್ಟಣದಿಂದ ಶನಿವಾರಸಂತೆಗೆ ಸರಬರಾಜಾಗುತ್ತಿರುವ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೆಪಿಟಿಸಿಎಲ್ ಅವರು ನಿರ್ವಹಿಸಬೇಕಿರುವುದರಿಂದ ತಾ. 9 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶನಿವಾರಸಂತೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಹಂಡ್ಲಿ, ಕೊಡ್ಲಿಪೇಟೆ, ಶನಿವಾರಸಂತೆ, ಗೋಪಾಲ್‍ಪುರ, ಬಲ್ಲಾರಳ್ಳಿ, ಕಿತ್ತೂರು, ಗೌಡಳ್ಳಿ, ನಿಡ್ತ, ಅಂಕನಹಳ್ಳಿ, ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕುಶಾಲನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅವರ ಕೋರಿಕೆಯಂತೆ ತಾ. 9 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕುಶಾಲನಗರ, ಕೆ.ವಿ ಸೋಮವಾರಪೇಟೆ, ಆಲೂರು ಸಿದ್ದಾಪುರ ಸುಂಟಿಕೊಪ್ಪ ಹಾಗೂ ಮಡಿಕೇರಿ, ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕುಶಾಲನಗರ, ಕೂಡಿಗೆ, ನಂಜರಾಯಪಟ್ಟಣ, ಸುಂಟಿಕೊಪ್ಪ, ಚೆಟ್ಟಳ್ಳಿ, ಸೋಮವಾರಪೇಟೆ, ಶಾಂತಳ್ಳಿ, ಕುಮಾರಹಳ್ಳಿ, ಗೌಡಳ್ಳಿ, ಹೆಗ್ಗಡಮನೆ ಅಬ್ಬೂರುಕಟ್ಟೆ, ಐಗೂರು, ಆಲೂರು ಸಿದ್ದಾಪುರ, ಗೋಣಿಮರೂರು, ಮಾಲಂಬಿ, ಹೊಸಗುತ್ತಿ, ಗಣಗೂರು ಮಡಿಕೇರಿ, ಮೇಕೇರಿ, ಕಡಗದಾಳು, ಸಂಪಾಜೆ, ಭಾಗಮಂಡಲ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ಸೆಸ್ಕ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕೋರಿದ್ದಾರೆ.