ಸುಂಟಿಕೊಪ್ಪ, ಜೂ.7: ಕೊಡಗರಹಳ್ಳಿ ವ್ಯಾಪ್ತಿಯ ಕಲ್ಲೂರು ನಿವಾಸಿ ವಿವಾಹಿತ ಮಹಿಳೆ ತಾ.2 ರಂದು ನಾಪತ್ತೆಯಾಗಿರುವ ಬಗ್ಗೆ ಪತಿ ಸದಾನಂದ ಸುಂಟಿಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದಾರೆ.
2 ವರ್ಷಗಳ ಹಿಂದೆ ಭಾರತಿ (26) ಎಂಬಾಕೆಯನ್ನು ಬಸವನಹಳ್ಳಿ ಯಲ್ಲಿ ಇರುವಾಗ ಪ್ರೀತಿಸಿ ವಿವಾಹವಾಗಿದ್ದರು. ಆಕೆ ಬ್ಯಾಂಕಿಗೆ ಹೋಗಿ ಬರುವುದಾಗಿ ತೆರಳಿ ಸಂಜೆಯಾದರೂ ವಾಪಾಸ್ಸು ಮನೆಗೆ ಬಾರದಿದ್ದಾಗ; ಮೊಬೈಲ್‍ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್‍ಆಫ್ ಆಗಿದ್ದು ಮರುದಿನ ಕಕ್ಕಬೆ ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ ಆಕೆ ಬ್ಯಾಂಕಿಗೆ ಭೇಟಿ ನೀಡಿಲ್ಲವೆಂದು ಶಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಪತಿ ಸದಾನಂದ ದೂರು ನೀಡಿದ್ದಾರೆ. ಈ ಬಗ್ಗೆ ಸುಳಿವು ಲಭಿಸಿದರೆ ದೂರವಾಣಿ ಸಂಖ್ಯೆ 08276-262333, 9480804953 ಕರೆ ಮಾಡುವಂತೆ ಠಾಣಾಧಿಕಾರಿ ಬಿ.ತಿಮ್ಮಪ್ಪ ತಿಳಿಸಿದ್ದಾರೆ.