ಮಡಿಕೇರಿ, ಜೂ. 5: ನಗರದ ಕೈಗಾರಿಕಾ ಬಡಾವಣೆಯಲ್ಲಿ ಮಹಾತ್ಮ ಗಾಂಧಿ ಜಿಲ್ಲಾ ಕೇಂದ್ರ ಗ್ರಂಥಾಲಯ ಆಧುನೀಕೃತ ಕಟ್ಟಡವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವÀ ವಿ.ಸೋಮಣ್ಣ ಅವರು ಸಾರ್ವಜನಿಕರಿಗೆ ಸಮರ್ಪಿಸಿದರು. ಈ ಸಂದರ್ಭ ಗ್ರಂಥಾಲಯದ ವ್ಯವಸ್ಥೆಗಳನ್ನು ಸದುಪಯೋಗ ಪಡೆಸಿಕೊಳ್ಳಲು ಕರೆ ನೀಡಿದರು. ಇ-ಗ್ರಂಥಾಲಯ ಉದ್ಘಾಟನೆ ಗ್ರಂಥಾಲಯದಲ್ಲಿ ಆನ್‍ಲೈನ್ ಪುಸ್ತಕಗಳನ್ನು ಓದಲು 4 ಗಣಕಯಂತ್ರಗಳ ಸೌಲಭ್ಯ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಪ್ರತಿ ಬಾರಿ ಜಿಲ್ಲೆಗೆ ಭೇಟಿ ನೀಡಿದಾಗಲೂ ಎಚ್ಚರಿಕೆ ಹಾಗೂ ಕುತೂಹಲದ ಹೆಜ್ಜೆಗಳನ್ನಿಡುತ್ತಾರೆ. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಕಾರ್ಯಕ್ರಮಗಳಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ಇಂದು ಗ್ರಂಥಾಲಯ ಉದ್ಘಾಟನೆಯ ಸಂದರ್ಭದಲ್ಲಿಯೂ ದೂರದಲ್ಲಿದ್ದ ವೀಣಾ ಅಚ್ಚಯ್ಯ ಹಾಗೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಹತ್ತಿರಕ್ಕೆ ಕರೆದು ಜೊತೆಯಲ್ಲಿ ಉದ್ಘಾಟನೆ ಮಾಡಿದರು. ಗ್ರಂಥಾಲಯದ ಒಳಗೆ ದೀಪ ಪ್ರಜ್ವಲನಾ ಸಂದರ್ಭದಲ್ಲಿ ತನ್ನ ಸುತ್ತ ಮಕ್ಕಳಿದ್ದಾರೆಯೇ ಎಂದು ಕೇಳಿ ದೂರದಲ್ಲಿದ್ದ ಯುವತಿ ಪ್ರಜ್ಞಾಳನ್ನು ಆಹ್ವಾನಿಸಿ ದೀಪ ಬೆಳಗುವಂತೆ ಕೋರಿದರು.

ಇವೆಲ್ಲದರ ನಡುವೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಹಾಗೂ ಪದಾಧಿಕಾರಿ ಅಪ್ಪಣ್ಣ ಮಾತ್ರ ಯಾರ ಕಣ್ಣಿಗೂ ಬೀಳದೆ ದೂರದಲ್ಲಿ ನಿಂತಿದ್ದರು. ಈ ಬಗ್ಗೆ ‘ಶಕ್ತಿ’ ಪ್ರಶ್ನಿಸಿದಾಗ ‘ಆಹ್ವಾನವಿಲ್ಲದ ಕಡೆ ಪಾಲ್ಗೊಳ್ಳುವುದಕ್ಕೆ ತಾವು ತಯಾರಿಲ್ಲ’ ಎಂದು ಖಡಕ್ ಆಗಿ ಅವರು ನುಡಿದ ಮಾತು ಹಲವರ ಬಗ್ಗೆ ಅವರಿಗಿರುವ ಅಸಮಾಧಾನವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.(ಮೊದಲ ಪುಟದಿಂದ) ಕಲ್ಪಿಸಲಾಗಿದ್ದು, ಸೋಮಣ್ಣ ಅವರು ಇ-ಗ್ರಂಥಾಲಯದಲ್ಲಿ ತಮ್ಮ ಖಾತೆ ತೆರದು ಇ-ಗ್ರಂಥಾಲಯ ಸೇವೆಗೆ ಚಾಲನೆ ನೀಡಿದರು.

ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಖಾಸಗಿ ಸಂಸ್ಥೆ, ಮಿಂಟ್‍ಬುಕ್ ಸಹಯೋಗದೊಂದಿಗೆ ರಾಜ್ಯಾದ್ಯಂತ ಇ-ಗ್ರಂಥಾಲಯ ಸೇವೆ ಚಾಲನೆಯಲ್ಲಿದ್ದು ಜಿಲ್ಲೆಯಲ್ಲೂ ಇದರ ಸೇವೆ ಆರಂಭವಾಗಿದೆ. ‘ಞಚಿಡಿಟಿಚಿಣಚಿಞಚಿಜigiಣಚಿಟಠಿubಟiಛಿಟibಡಿಚಿಡಿಥಿ.oಡಿg’ ವೆಬ್‍ಸೈಟ್ ಮೂಲಕ ಆನ್‍ಲೈನ್ ಖಾತೆ ಸೃಷ್ಟಿಸಿ ಸುಮಾರು 1.5 ಲಕ್ಷ ಇ-ಪುಸ್ತಕಗಳ ಸದುಪಯೋಗ ಉಚಿತವಾಗಿ ಪಡೆದುಕೊಳ್ಳ ಬಹುದಾಗಿದೆ ಎಂದು ಮಿಂಟ್‍ಬುಕ್ ಸಂಸ್ಥೆಯ ಪ್ರಮುಖರು ಮಾಹಿತಿ ನೀಡಿದರು. ಹಾಗೆಯೇ ಇ-ಸಾರ್ವಜನಿಕ ಗ್ರಂಥಾಲಯ ಎಂಬ ಮೊಬೈಲ್ ಆ್ಯಪ್ ಕೂಡ ಲಭ್ಯವಿದ್ದು, ಇದನ್ನು ಉಪಯೋಗಿಸಬಹುದೆಂದು ಮಾಹಿತಿ ನೀಡಿದರು.

ಗ್ರಂಥಾಲಯ ಸದಸ್ಯತ್ವಕ್ಕೆ ರೂ.211

ಗ್ರಂಥಾಲಯದ ಕಾಯಂ ಸದಸ್ಯತ್ವಕ್ಕೆ ರೂ. 211 ಒಂದು ಬಾರಿ ಪಾವತಿಸಬೇಕು. ಇವರುಗಳಿಗೆ 3 ಕಾರ್ಡ್ ನೀಡಲಾಗುವುದು. ಗ್ರಂಥಾಲಯದಿಂದ ಪುಸ್ತಕ ಬೇಕಿದ್ದರೆ ಕಾರ್ಡ್ ಹಸ್ತಾಂತರಿಸಿ, ಒಂದು ಕಾರ್ಡಿಗೆ ಒಂದು ಎಂಬಂತೆ ಪುಸ್ತಕ ಪಡೆದುಕೊಳ್ಳಬಹುದು. 15 ದಿನದೊಳಗೆ ಹಿಂತಿರುಗಿ ಸಬಹುದಾಗಿದೆ ಎಂದು ಗ್ರಂಥಾಲಯ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಎಂಎಲ್‍ಸಿ ಸುನಿಲ್ ಸುಬ್ರಮಣಿ, ಎಂಎಲ್‍ಸಿ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್.ಹೊಸಮನಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕರಾದÀ ವೆಂಕಟೇಶ್, ಚಂದ್ರಶೇಖರ್, ಲೀಲಾವತಿ, ಇತರರು ಇದ್ದರು.