ಮಡಿಕೇರಿ, ಜೂ. 4: ಸೋಮವಾರದಿಂದ ಹೊಟೇಲ್, ರೆಸಾರ್ಟ್, ಹೋಂಸ್ಟೇಗಳ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಚಾರಣಕ್ಕೂ ಕೂಡ ಅನುಮತಿ ನೀಡಿದ ಸರ್ಕಾರ, ಆತಿಥ್ಯ ಸೇವೆ ನೀಡುವ ಎಲ್ಲಾ ಸಂಸ್ಥೆಗಳು ಕಾರ್ಯಾರಂಭ ಮಾಡಲು ಅನುಮತಿ ನೀಡಿ ಆದೇಶಿಸಿದೆ. ಇದರೊಂದಿಗೆ ಸರ್ಕಾರ ಈಗಾಗಲೇ ನೀಡಿರುವ ಆರೋಗ್ಯ ಸಂಬಂಧಿತ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶದಲ್ಲಿ ಸ್ಪಷ್ಟಪಡಿಸಿದೆ.