*ಗೋಣಿಕೊಪ್ಪಲು : ಮಡಿಕೇರಿ ಜಿಲ್ಲಾ ಕೇಂದ್ರ ಗ್ರಂಥಾಲಂiÀiದ ಸಹ ಗ್ರಂಥಪಾಲಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಬಿ.ಕೆ. ಲಲಿತ ಅವರನ್ನು ಮಡಿಕೇರಿ ಗ್ರಂಥಾಲಯದ ವತಿಯಿಂದ ಸನ್ಮಾನಿಸಿ ಬೀಳ್ಕೊಡ ಲಾಯಿತು. 30 ವರ್ಷಗಳ ಸುದೀರ್ಘ ಸೇವೆಯಲ್ಲಿ ಮಂಗಳೂರು, ದ. ಕನ್ನಡ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಪಾಲಕಿಯಾಗಿ ವೃತ್ತಿ ನಿರ್ವಹಿಸಿದ ಇವರು ಪುತ್ತೂರು ಗ್ರಂಥಾಲಯ, ಕೊಡಗು ಜಿಲ್ಲೆಯ ಸುಂಟಿಕೊಪ್ಪ ಶಾಖಾ ಗ್ರಂಥಾಲಯ, ವೀರಾಜಪೇಟೆ ಶಾಖಾ ಗ್ರಂಥಾಲಯದಲ್ಲಿ ಮತ್ತು ಮಡಿಕೇರಿ ಜಿಲ್ಲಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2008 ಸಾಲಿನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ನೀಡುವ ರಾಜ್ಯ ಮಟ್ಟದ ಸೇವಾ ಪುರಸ್ಕಾರ ಪಡೆದುಕೊಂಡಿರುವ ಇವರು, ಗೋಣಿಕೊಪ್ಪಲು ಕೆ.ವಿ. ಹರಿನಾರಾಯಣ ಅವರ ಪತ್ನಿಯಾಗಿದ್ದಾರೆ. ಶನಿವಾರಸಂತೆ: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕೃಷ್ಣನಾಯಕ್ ಸಹಾಯಕ ಠಾಣಾಧಿಕಾರಿ ಈರಪ್ಪ ಅವರುಗಳು ನಿವೃತ್ತಿಗೊಂಡಿದ್ದು ಹಾಗೂ ಹೆಡ್ ಕಾನ್ಸ್ ಟೇಬಲ್ ಜಯಕುಮಾರ್ ಮುಂಬಡ್ತಿ ಹೊಂದಿ ಮಡಿಕೇರಿ ಗ್ರಾಮಾಂತರ ಠಾಣೆಗೆ ಸಹಾಯಕ ಠಾಣಾಧಿಕಾರಿಯಾಗಿ ತೆರಳುತ್ತಿದ್ದು ಅವರುಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕುಶಾಲನಗರ ಪೊಲೀಸ್ ಠಾಣೆಯ ಡಿವೈಎಸ್ಪಿ ಹೆಚ್. ಶೈಲೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿ ಸನ್ಮಾನಿಸಿ ಮಾತನಾಡಿದರು. ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಡೇಗೌಡ ಎಎಸ್‍ಐ ಹೆಚ್. ಎಂ. ಗೋವಿಂದ ಸಿಬ್ಬಂದಿಗಳಾದ ಲೋಕೇಶ್, ಬೋಪಣ್ಣ, ರವಿಚಂದ್ರ, ಶಫೀರ್, ವಿನಯ ಮಾತನಾಡಿದರು.

ಸಮಾರಂಭದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಪಿಎಸ್‍ಐ ತಿಮ್ಮಪ್ಪ, ಕುಶಾಲನಗರ ಠಾಣೆ ಪಿಎಸ್‍ಐ ವೆಂಕಟರಮಣ, ಮಡಿಕೇರಿ ವೃತ್ತ ನಿರೀಕ್ಷಕ ಮೇದಪ್ಪ, ಸೋಮವಾರಪೇಟೆ ಪಿಎಸ್‍ಐ ಶಿವಶಂಕರ ಹಾಗೂ ಪತ್ರಕರ್ತ ನರೇಶ್‍ಚಂದ್ರ ಉಪಸ್ಥಿತರಿದ್ದರು. ಮಹಿಳಾ ಪೊಲೀಸ್ ಸಿಬ್ಬಂದಿ ಶಶಿಕಲಾ ಪ್ರಾರ್ಥಿಸಿ ಬೋಪಣ್ಣ ಸ್ವಾಗತಿಸಿ ಮಹಿಳಾ ಸಿಬ್ಬಂದಿ ಪೂರ್ಣಿಮ ನಿರೂಪಿಸಿದರು. ಗೋವಿಂದ್ ವಂದಿಸಿದರು.

ವೀರಾಜಪೇಟೆ : ಜಿಲ್ಲೆಯ ವಿವಿಧೆಡೆಗಳಲ್ಲಿ ಈ ಹಿಂದಿನ ಕೆಇಬಿ ಹಾಗೂ ಚೆಸ್ಕಾಂ ಇಲಾಖೆಯಲ್ಲಿ ಕಳೆದ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ತಾ. 31 ರಂದು ವಯೋ ನಿವೃತ್ತಿ ಹೊಂದಿದ ವೀರಾಜಪೇಟೆಯ ಎಂ.ಎಂ.ಆಲಿ ಅವರನ್ನು ಸ್ಥಳೀಯ ಚೆಸ್ಕಾಂ ಸಿಬ್ಬಂದಿಗಳು ಹಾಗೂ ಹಿತೈಷಿಗಳು ಆತ್ಮೀಯವಾಗಿ ಬೀಳ್ಕೊಟ್ಟರು. ಸಮಾರಂಭದಲ್ಲಿ ಸಹಾಯಕ ಕಾರ್ಯ ನಿರ್ವಾಹಕಾ ಅಭಿಯಂತರ ಪಿ.ಎಸ್.ಸುರೇಶ್, ಸಹಾಯಕ ಅÀಭಿಯಂತರ ರಮೇಶ್, ರವಿಶಂಕರ್ ಹಾಗೂ ಲೈನ್‍ಮೆನ್ ಯೋಗರಾಜ್ ಪಾಲ್ಗೊಂಡಿದ್ದರು.