ಕೂಡಿಗೆ, ಜೂ. 4 : ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನೆನಹಳ್ಳಿ ಗ್ರಾಮದಲ್ಲಿ ಅಲ್ಲಿನ ಗ್ರಾಮಸ್ಧರು ಗ್ರಾಮ ದೇವತೆ ಪೂಜೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದರು.

ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಹಬ್ಬಹರಿದಿನಗಳು ಇಲ್ಲದ ಕಾರಣ ಈ ಗ್ರಾಮದ ರೈತರು ಸಂಪ್ರದಾಯದಂತೆ ಸರಳವಾಗಿ ಗ್ರಾಮ ದೇವತೆಗೆ ಪೂಜೆ ಮಾಡಿ ನಂತರ ತಮ್ಮ ತಮ್ಮ ಜಮೀನಿನಲ್ಲಿ ಹಬ್ಬದ ನೆನಪಿಗೆ ಗಿಡಗಳನ್ನು ನೆಟ್ಟರು. ಈ ಸಂದರ್ಭ ಗ್ರಾಮದ ಪ್ರಮುಖರು ಹಾಗೂ ರೈತರು ಭಾಗವಹಿಸಿದ್ದರು.