ಕೂಡಿಗೆ, ಜೂ, 3: ಕೂಡಿಗೆಯಲ್ಲಿರುವ ಕಾಪೆರ್ÇರೇಷÀನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಗ್ರಾಮೀಣ ಹಾಗೂ ನಗರ ಮಟ್ಟದಲ್ಲಿರುವ ಯುವಕ ಯುವತಿಯರಿಗೆ ಸ್ವ ಉದ್ಯೋಗ ತರಬೇತಿಯನ್ನು ನೀಡಲಾಗುವುದು ಎಂದು ಸಂಸ್ಥೆ ನಿರ್ದೇಶಕರಾದ ಡಾ ಜಿ ಸುರೇಶ್ ತಿಳಿಸಿದ್ದಾರೆ. 2020-21 ನೇ ಸಾಲಿನಲ್ಲಿ 18ರಿಂದ45 ವಷರ್Àದ ಒಳಗಿನ ನಿರುದ್ಯೋಗಿ ಯುವಕ ಯುವತಿಯರಿಗೆ ಹೊಲಿಗೆ ತರಬೇತಿ, ಫೋರ್ಟೋ ಗ್ರಾಫಿ ವೀಡಿಯೋಗ್ರಾಫಿ, ಕುರಿ ಮತ್ತು ಆಡು ಸಾಕಾಣಿಕೆ, ಮೊಬೈಲ್ ರಿಪೇರಿ ಬ್ಯೂಟಿಪಾರ್ಲರ್ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಕಂಪ್ಯೂಟರ್, ಡಿಟಿಪಿ ಸೇರಿದಂತೆ ವಿವಿಧ ಬಗೆಯ ತರಬೇತಿಗಳನ್ನು ಸಂಸ್ಥೆಯಲ್ಲಿ ನೀಡಲಾಗುವುದು ಇದರ ಸದುಪಯೋಗವನ್ನು ನಿರುದ್ಯೋಗಿ ಯುವಕ ಯುವತಿಯರು ಪಡೆದುಕೊಂಡು ಬ್ಯಾಂಕ್ ಮೂಲಕ ಸಾಲ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗಿಗಳಾಗಬಹುದೆಂದು ಸುರೇಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿದೆ 278730 ಮೂಲಕ ಪಡೆಯಬಹುದು ಎಂದು ತಿಳಿಸಿದ್ದಾರೆ.